ರಾಣೆಬೆನ್ನೂರ

ಎಸ್‌. ಕೆ.ಡಿ.ಆರ್‌. ಡಿ. ಪಿ : ಕಮದೋಡ ಕಾರ್ಯಕ್ಷೇತ್ರದಲ್ಲಿ ಅರಣ್ಯೀಕರಣಕ್ಕೆ ಚಾಲನೆ

ಎಸ್‌. ಕೆ.ಡಿ.ಆರ್‌. ಡಿ. ಪಿ : ಕಮದೋಡ ಕಾರ್ಯಕ್ಷೇತ್ರದಲ್ಲಿ ಅರಣ್ಯೀಕರಣಕ್ಕೆ ಚಾಲನೆ

ರಾಣೇಬೆನ್ನೂರು,04 : ಪರಿಸರವನ್ನು ಸಮತೋಲತೆಯಿಂದ ಕಾಪಾಡಿಕೊಳ್ಳಬೇಕಾದರೆ, ಪ್ರತಿಯೊಬ್ಬರೂ ಅರಣ್ಯೀಕರಣದತ್ತ ಮುಖ ಮಾಡಬೇಕಾದ ಇಂದಿನ ಅಗತ್ಯವಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಹೇಳಿದರು. 

ಅವರು ತಾಲೂಕಿನ ಕಮದೋಡ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್‌ ಆಯೋಜಿಸಿದ್ದ ಶಶಿ ನೆಡುವ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.   

ಸಾಮಾಜಿಕ ಅರಣ್ಯೀಕರಣದಿಂದ ಪರಿಸರವನ್ನು, ಅತಿ ವೇಗದಲ್ಲಿ ವಿಪುಲವಾಗಿ ಬೆಳೆಸಲು ಮತ್ತು ಅಧಿಕ ಪ್ರಮಾಣದಲ್ಲಿ ಸಂರಕ್ಷಿಸಲು ಸಾಧ್ಯವಾಗುವುದು. ಎಂದ ಅವರು ಇಂದಿನ  ವಿದ್ಯಾರ್ಥಿ ಸಮುದಾಯ,ನಾಗರಿಕರು ಸಾಮಾಜಿಕ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು ಹಿರಿಯ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ವಿವಿಧ ಪ್ರಭೇದಗಳ ಶಶಿಗಳನ್ನು ಸಾಮೂಹಿಕವಾಗಿ ನಾಟಿ ಮಾಡುವುದರ ಮೂಲಕ  ಸಂಭ್ರಮಿಸಿದರು. ಶಾಲೆಯ ಪ್ರಧಾನ ಗುರು ಬಸವರಾಜ ಬಡಿಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಕೃಷಿ ಮೇಲ್ವಿಚಾರಕ ರಮೇಶ ಅವರು, ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರ ಕುರಿತಂತೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು ಕಾರ್ಯಕ್ರಮದಲ್ಲಿ ಯೋಜನೆಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಶಾಲೆಯ  ಶಿಕ್ಷಕರು,ಎಸ್‌.ಡಿಎಂಸಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರು  ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು 


ಸುದ್ದಿ ಓದಿ