ಗುಳೇಗುಡ್ಡ

ಯಂಡಿಗೇರಿಗೆ ಗ್ರಾಮೀಣ ಪತ್ರಕರ್ತ ಪ್ರಶಸ್ತಿ

ಯಂಡಿಗೇರಿಗೆ ಗ್ರಾಮೀಣ ಪತ್ರಕರ್ತ ಪ್ರಶಸ್ತಿ

ಗುಳೇದಗುಡ್ಡ 28: ದಿ. ಶ್ರೀಶೈಲ ಅಂಗಡಿ ಇವರ ಸ್ಮರಣಾರ್ಥವಾಗಿ ನೀಡುವ ಉತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿಗೆ ಇಲ್ಲಿನ ವಿಜಯ ಕರ್ನಾಟಕ ದಿನ ಪತ್ರಿಕೆ ವರದಿಗಾರ  ಬಸವರಾಜ ಯಂಡಿಗೇರಿಗೆ  ಸಂದಿದೆ. 

ಬಸವರಾಜ ಯಂಡಿಗೇರಿ ಅವರು ಗುಳೇದಗುಡ್ಡದ ಗ್ರಾಮೀಣ ಪ್ರದೇಶದಲ್ಲಿ 25 ವರ್ಷಗಳಿಂದ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದಿ.31 ರಂದು ಬೆಳಿಗ್ಗೆ 11 ಘಂಟೆಗೆ ಪತ್ರಿಕಾ ದಿನಾಚರಣೆ ನಿಮಿತ್ಯ ನವನಗರದ ನೂತನ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್‌.ಶಾಲಗಾರ ತಿಳಿಸಿದ್ದಾರೆ. 



ಸುದ್ದಿ ಓದಿ