ಅಥಣಿ

20ರಂದು ಆರ್‌ಎಸ್‌ಪಿ ಗ್ರುಪ್‌ಗೆ ಚಾಲನೆ: ರಾವಸಾಬ ಐಹೊಳೆ

20ರಂದು ಆರ್‌ಎಸ್‌ಪಿ ಗ್ರುಪ್‌ಗೆ ಚಾಲನೆ: ರಾವಸಾಬ ಐಹೊಳೆ

ಲೋಕದರ್ಶನ ವರದಿ 


ಅಥಣಿ 16: ವಿವಿಧ ರಚನಾತ್ಮಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಉದ್ಯಮಿ ರವಿ ಪೂಜಾರಿ ನೇತೃತ್ವದ ಆರ್‌ಎಸ್‌ಪಿ ಗ್ರುಪ್‌ಗೆ ಮಾರ್ಚ 20 ಭಾನುವಾರದಂದು ಆರ್‌ಎಸ್‌ಪಿ ಕಾಲನಿಯಲ್ಲಿ ಚಾಲನೆ ನೀಡಲಾಗುವುದು ಎಂದು ಉದ್ಯಮಿ, ಪುರಸಭಾ ಸದಸ್ಯ ರಾವಸಾಬ ಐಹೊಳೆ ಹೇಳಿದರು. 

           ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದಿಂದ ಬರಿಗೈಲಿ ಅಥಣಿಗೆ ಬಂದ ಉದ್ಯಮಿ ರವಿ ಪೂಜಾರಿ ಇಂದು ಸಾಮಾಜಿಕ, ಕನ್ನಡ ಪರ, ಧಾರ್ಮಿಕ ಕಾರ್ಯಕರ್ತನಾಗಿ ಬೆಳೆದಿದ್ದಾರೆ. ಅವರ ಸಾಮಾಜಿಕ ಹಾಗೂ ಧಾರ್ಮಿಕ ಬದ್ಧತೆ ಮೆಚ್ಚುವಂತಹದ್ದು ಎಂದರು. ಕರೋನಾ ಸಮಯದಿಂದ ಇಲ್ಲಿಯವರೆಗೂ ರೋಗಿಗಳ ಅನುಕೂಲಕ್ಕಾಗಿ ಉಚಿತವಾಗಿ ಅಂಬ್ಯುಲೆನ್ಸ ಸೇರಿದಂತೆ ಅನೇಕ ಸೇವೆಗಳನ್ನು ರವಿ ಪೂಜಾರಿ ಒದಗಿಸುತ್ತಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನೂ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ ಎಂದರು. 

         ಉದ್ಯಮಿ ರವಿ ಪೂಜಾರಿ ಮಾತನಾಡಿ, ಮಾರ್ಚ 20ರಂದು ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಾಹಾಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ, ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳ ಸಿದ್ಧ ಸ್ವಾಮೀಜಿ, ಹಾವೇರಿ ಅಗಡಿ ಮಠದ ಗುರುಲಿಂಗ ಸ್ವಾಮೀಜಿ ವಹಿಸುವರು ಎಂದು ತಿಳಿಸಿದರು. 

             ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಾಲನೆ ನೀಡುವರು. ದೀಪ ಪ್ರಜ್ವಲನೆಯನ್ನು ಶಾಸಕ ಹಾಗೂ ಕೊಳಗೇರಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಮಾಡುವರು. ಮುಖ್ಯ ಅತಿಥಿಗಳಾಗಿ ಕುಡಚಿ ಶಾಸಕ ಪಿ.ರಾಜು, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಬೆಳಗಾವಿ ಡಿಸಿಪಿ ಎಸ್‌.ವೈ.ಪಾಟೀಲ, ತಹಶಿಲ್ದಾರ ದುಂಡಪ್ಪ ಕೋಮಾರ, ಕಾಗವಾಡ ತಹಶಿಲ್ದಾರ ರಾಜು ಬುರ್ಲಿ, ಅಥಣಿ ಡಿವೈಎಸ್‌ಪಿ ಎಸ್‌.ವಿ.ಗೀರೀಶ, ಅಬಕಾರಿ ಡಿಎಸ್‌ಪಿ ಆನಂದ ಉಕ್ಕಲಿ, ಸಿಪಿಐ ಶಂಕರಗೌಡ ಪಾಟೀಲ, ವಿಜಯಪುರದ ಸಿಪಿಐ ಬಸವರಾಜ ಬಿಸನಕೊಪ್ಪ, ಮಲ್ಲಿಕಾರ್ಜುನ ಸಿಂಧೂರ, ಪಿಎಸ್‌ಐ ಕುಮಾರ ಹಾಡಕರ, ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ, ರಾಜು ಕಾಗೆ ಆಗಮಿಸುವರು ಅಲ್ಲದೆ ಪಟ್ಟಣದ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು. 

            ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳಿಂದ ಹಾಸ್ಯ ರಸ ಮಂಜರಿ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಉಪಸ್ಥಿತರಿದ್ದರು. 


ಸುದ್ದಿ ಓದಿ