ಐನಾಪುರ ಏತ ನೀರಾವರಿ ಯೋಜನೆಗೆ ರೈತರು ಮುಖಂಡರಿಂದ ಚಾಲನೆ
ಕಾಗವಾಡ 30: ಕಾಗವಾಡ ವಿಧಾನಸಭಾ ಕ್ಷೇತ್ರದ 8 ಗ್ರಾಮಗಳಲ್ಲಿಯೇ 21 ಸಾವಿರ ಎಕರೆ ಕ್ಷೇತ್ರಕ್ಕೆ ಶ್ರೀಮಂತ ಪಾಟೀಲ್ ಇವರ ಆದೇಶ ಮೇರೆಗೆ ಅವರ ಅನುಪಸ್ಥಿತಿಯಲ್ಲಿ ಸ್ಥಳೀಯ ರೈತರು ಮುಖಂಡರು ಐನಾಪುರ ಏತ ನೀರಾವರಿ ಯೋಜನೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಂದು ಐನಾಪುರ್ ಎತ ನೀರಾವರಿ ಯೋಜನೆಯ ಅಭಿಯಂತರಾದ ಪ್ರಶಾಂತ ಪೋತದಾರ್, ಬಿ.ಬಿ.ಗಲಗಲಿ ಇವರ ಮುಖ್ಯ ಉಪಸ್ಥಿತಿಯಲ್ಲಿ ಶಾಸಕರ ಆಪ್ತ ಸಹಾಯಕ ಸಚಿನ್ ದೇಸಾಯಿ, ಮೋಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೂತಾಳಿ ಥರಥರೆ ಇವರು ಪೂಜೆ ಸಲ್ಲಿಸಿ ಎತ ನೀರಾವರಿ ಯೋಜನೆ ಪ್ರಾರಂಭಿಸಿದರು.
21 ಸಾವಿರ ಎಕರೆ ಕ್ಷೇತ್ರಕ್ಕೆ ನೀರು
ಸಚಿವರ ಆಪ್ತ ಸಹಾಯಕ ಸಚಿನ್ ದೇಸಾಯಿ ಮಾತನಾಡಿ ಈ ವರ್ಷದ ಮಳೆಗಾಲದಲ್ಲಿ ಮಳೆ ವಿಳಂಬವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಮತ್ತು ಬೇಸಾಯಕ್ಕಾಗಿ ನೀರಿನ ಸಮಸ್ಯೆ ಮನಗಂಡು ಶಾಸಕ ಶ್ರೀಮಂತ ಪಾಟೀಲರು ಅಧಿಕಾರಿಗಳಿಗೆ ಆದೇಶ ನೀಡಿ ಯೋಜನೆಗೆ ಚಾಲನೆ ನೀಡಲು ಕೋರಿದರು. ಅವರ ಅನುಪಸ್ಥಿತಿಯಲ್ಲಿ ಯೋಜನೆ ಪ್ರಾರಂಭಿಸಲಾಗಿದೆ. ಯೋಜನೆಯ ಮುಖಾಂತರ 8 ಗ್ರಾಮಗಳಲ್ಲಿಯೇ ಸುಮಾರು 21,000 ಏಕರೆ ಕ್ಷೇತ್ರಕ್ಕೆ ಯೋಜನೆ ನೀರು ಪೂರೈಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ಕಾಲುವೆಗಳ ದುರಸ್ತಿಗಾಗಿ ಎಂಟು ಕೋಟಿ ಅನುದಾನ ಮಂಜೂರ.
ಐನಾಪುರ್ಏತ ನೀರಾವರಿ ಯೋಜನೆಯ ಅಭಿಯಂತರರಾದ ಪ್ರಶಾಂತ ಪೋತದಾರ ಮಾತನಾಡಿ ಐನಾಪುರ ನೀರಾವರಿ ಯೋಜನೆ ಪ್ರಾರಂಭಿಸಲಾಗಿದೆ. ಕೆಲ ದಿನಗಳಿಂದ ನದಿಯಲ್ಲಿ ನೀರಿನ ಕೊರತೆ ಇತ್ತು. ಈಗ ನದಿಯಲ್ಲಿ ನೀರು ಬರುತ್ತಿದ್ದು ಶಾಸಕ ಶ್ರೀಮಂತ ಪಾಟೀಲರ ಆದೇಶ ಮೇರೆಗೆ ಯೋಜನೆಗೆ ಚಾಲನೆ ನೀಡಲಾಗಿದೆ. ಕೆಲ ದಿನಗಳ ವಿಳಂಬಕ್ಕೆ ಕಾರಣ ಎಂದರೆ ನೀರಿನ ಕಾಲುವೆಗಳು ಬಸಿದು ಹೋಗುತ್ತಿದ್ದು ಇವುಗಳು ದುರಸ್ತಿಗಾಗಿ ಶಾಸಕರು 8 ಕೋಟಿ ರೂ. ಅನುದಾನ ಮಂಜೂರು ಗೊಳಿಸಿದ್ದಾರೆ. ಇದರ ಕಾಮಗಾರಿ ಕೈಗೊಂಡಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ಯೋಜನೆಯ ಲಾಭ ನೂರಾರು ರೈತರ 21000 ಎಕರೆ ಕ್ಷೇತ್ರದಲ್ಲಿ ನೀರು ಬಳಸಲಾಗುತ್ತಿದೆ. ಮಳೆಗಾಲದಲ್ಲಿ ಯೋಜನೆ ನಿರಂತರವಾಗಿ ಪ್ರಾರಂಭಿಸಲಾಗುತ್ತದೆ. ಸರಕಾರದ ಯೋಜನೆಯ ಸದುಪಯೋಗ ರೈತರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ನೀರಾವರಿ ಯೋಜನೆ ಪ್ರಾರಂಭಿಸಿ 12 ವರ್ಷ ಗತಿಸಿದೆ. ಯೋಜನೆಯ ಲಾಭ ಎಲ್ಲ ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದು ಮೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೂತಾಳಿ ಥರಥರ ಇವರು ಹೇಳಿದರು.
ರೈತ ಮುಖಂಡರಾದ ಬಾಳು ನರಹರಿ, ಧರ್ಮಜಿ ಕೊಳೇಕರ್, ಸಾಗರ ಪವಾರ, ಗಜಾನನ ಮುಂಜೆ, ಸುರೇಶ್ ಹಳ್ಳೂಳಿ, ಮಧುಥರಥರೆ, ದಿಲೀಪ್ ಬರಮಒಡೆಯರ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು