ಕಾಗವಾಡ

ನೀರಾವರಿ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 230 ಕೋಟಿ ಅನುದಾನ ಮಂಜೂರು

ನೀರಾವರಿ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 230 ಕೋಟಿ ಅನುದಾನ ಮಂಜೂರು

ಶೇಡಬಾಳ 21: ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿಯ ನೀರಾವರಿ ಇಲಾಖೆಯ ಅನೇಕ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 230 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ಕ್ಷೇತ್ರದಾದ್ಯಂತ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಶಾಸಕರಾದ ಶ್ರೀಮಂತ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಅದರಲ್ಲಿ ನೀರಾವರಿಗೆ ಹೆಚ್ಚಿನ ಅದ್ಯತೆ ನೀಡಿದ್ದಾರೆ. ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳು ಅವರ ಅವಧಿಯಲ್ಲಿ ವೇಗ ಪಡೆದುಕೊಂಡಿವೆ. ನೀರಾವರಿ ಕ್ಷೇತ್ರದಲ್ಲಿ ತಾವು ಶಾಸಕರಾಗುವ ಮೊದಲೇ ಅನೇಕ ಏತ ನೀರಾವರಿ ಯೋಜನೆಗಳನ್ನು ತಮ್ಮ ಕಾಖರ್ಾನೆಯಿಂದ ಮಾಡಿದ್ದಾರೆ. ಕ್ಷೇತ್ರದಲ್ಲಿ ಸುಮಾರು 1300 ಕೋಟಿ ರೂ.ಗಳ ಬಸವೇಶ್ವರ ಏತ ನೀರಾವರಿ ಯೋಜನೆಯು ಕೊನೆಯ ಹಂತದಲ್ಲಿದ್ದು, ಅದು ಶೀರ್ಘದಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಯ ಒಳಪಡದೇ ಇರುವ ಗ್ರಾಮಗಳ 23 ಕೆರೆ ತುಂಬುವ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಕೆರೆ ತುಂಬಲು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಅನುಮೋದನೆ ನೀಡಿದ್ದು, ರೂ. 230 ಕೋಟಿ ವಿಷೇಶ ಅನುದಾನ ಮಂಜೂರು ಮಾಡಲು ಒಪ್ಪಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಸಾರ್ವಜನಿಕರಿಂದ, ರೈತ ವರ್ಗದಿಂದ ಮುಖ್ಯಮಂತ್ರಿಗಳಿಗೆ ನೀರಾವರಿ ಸಚಿವರಿಗೆ ಹಾಗೂ ಶಾಸಕರಿಗೆ ಧನ್ಯವಾಗಳನ್ನು ತಿಳಿಸಿದ್ದು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೈತರು, ಪಟಾಕಿ ಸಿಡಿಸಿ, ಸಂಬ್ರಮಿಸಿದ್ದಾರೆ.

ಈ ವೇಳೆ ಮುಖಂಡರಾದ ಅಭಯ ಅಕಿವಾಟೆ, ರಾಮಗೌಡಾ ಪಾಟೀಲ, ಬೊಮ್ಮನ್ನ ಚೌಗುಲೆ, ಶಿವಾನಂದ ಪಾಟೀಲ, ಮಹಾವೀರ ಕಾತ್ರಾಳೆ, ಸುಭಾಶ ಮೊನೆ, ಸಚಿನ್ ಕಾಂಬಳೆ, ರೇವಣ್ಣ ಪಾಟೀಲ, ಮುರಗೆಪ್ಪ ಮಗದುಮ್, ಶುಭಂ ಕಾಟಕರ, ಶಿವಾನಂದ ನವಿನ್ಯಾಳೆ, ಅಕ್ಷಯ ಪಾಟೀಲ್, ಸಂತೋಷ ಕಿತಳೆ, ಮಹಾದೇವ ಕೋರೆ, ದಾದಾ ಶಿಂಧೆ, ರಮೇಶ್ ಕಾಂಬಳೆ, ಮೋಹನ್ ಜಾಧವ್, ಮಹಾದೇವ ಗಣಾಚಾರಿ, ಪ್ರಕಾಶ್ ಢಂಗ್, ಪ್ರಕಾಶ ಡೊಳ್ಳಿ, ಮಲ್ಲೇಶ ಮೇತ್ರಿ, ರವಿ ನಾಗೋಳ, ಅಬಾಸಾಬ ಚವ್ಹಾನ, ದೀಲಿಪ ಪವಾರ, ರಾಮು ಮಗದುಮ್, ಸೇರಿದಂತೆ ಕೇತ್ರದ ಎಲ್ಲ ರೈತ ವರ್ಗದವರು ಉಪಸ್ಥಿತರಿದ್ದರು.

 

ಸುದ್ದಿ ಓದಿ