ರೋಟರಿ ಸಂಸ್ಥೆ ಸಾರ್ವಜನಿಕರ ಸೇವೆಗೆ ಸದಾ ಬದ್ಧವಾಗಿದೆ: ಡಾ: ಬಿ.ಎಸ್.ಕೇಲಗಾರ
ರಾಣೇಬೆನ್ನೂರು: ಜು 10: ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯು, ತನ್ನ ಆರಂಭದಿಂದಲೂ, ಬಡವರ,ದೀನ ದಲಿತರ, ಅಲ್ಪಸಂಖ್ಯಾತರ ಎಲ್ಲ ಹಂತದ ಹಿಂದುಳಿದವರ, ನೊಂದು ಬೆಂದವರ ಸದಾಕಾಲವು ಸೇವೆಗೆ ಬದ್ದವಾಗಿದೆ ಎಂದು, ಟಾಗೋರ್ ಶಿಕ್ಷಣ ಸಂಸ್ಥೆಯ ಚೇರ್ಮನ್, ರೋ, ಡಾ: ಬಸವರಾಜ ಕೇಲಗಾರ್ ಹೇಳಿದರು. ಅವರು ಬುಧವಾರ ಸಂಜೆ, ರೋಟರಿ ಪ್ರಾಥಮಿಕ ಶಾಲಾ ಭವನದಲ್ಲಿ ಏರಿ್ಡಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ರೋಟರಿ, ಪಲ್ಸ್ ಪೋಲಿಯೋ, ಅಂದತ್ವ ನಿವಾರಣೆಗಾಗಿ, ಹತ್ತಾರು ವರ್ಷಗಳ ಕಾಲ ನಿರಂತರವಾಗಿ ಶ್ರಮಿಸಿದ್ದರ ಫಲವಾಗಿ, ದೇಶವೂ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಸಂಪೂರ್ಣ ನಿರ್ಮೂಲನೆಯಾಗಿದೆ ಇದು ರೋಟರಿ ಸಂಸ್ಥೆಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದರು.
ಜನಸಾಮಾನ್ಯರ, ಜನಪರ ಯೋಜನೆಗಳನ್ನು, ಜಾರಿಗೆ ತರುವುದರ ಮೂಲಕ ನಮ್ಮ ಅಂತರಾಷ್ಟ್ರೀಯ ಸೇವಾ ಸಂಸ್ಥೆಯು ಜನಸಾಮಾನ್ಯರ ಹತ್ತಿರಕ್ಕೆ ಬಂದು ನಿಂತಿದೆ. ರೋಟರಿ ಎಂದರೆ ಶ್ರೀಮಂತರ ಸಂಸ್ಥೆ ಎನ್ನುವ ಅಪವಾದ ಮರೆಯಾಗಿ ಜನಪರ ಸಂಸ್ಥೆಯಾಗಿ ಗುರುತಿಸುವಂತಾಗಿದೆ ಎಂದರು. ಜುಲೈ 13ರಂದು ಶನಿವಾರ ಮುಂಜಾನೆ 10:40 ಗಂಟೆಗೆ 2024 ಮತ್ತು 25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು, ಸ್ಟೇಷನ್ ರಸ್ತೆಯ ವರ್ತಕರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. ನೂತನ ಅಧ್ಯಕ್ಷ ವೀರೇಶ ಸಿ ಮೋಟಗಿ, ಇನ್ನರ್ ವ್ಹಿಲ್ ಅಧ್ಯಕ್ಷ ಶ್ರೀಮತಿ ಸಂಜನಾ ಸಿ.ಕುರುವತ್ತಿ, ಕಾರ್ಯದರ್ಶಿಗಳಾದ ಪ್ರಕಾಶ್ ಪಿ ಮಾಳಗಿ, ಶ್ರೀಮತಿ ಪ್ರಮೀಳಾ ಆರ್ ಜಂಬಗಿ ಮತ್ತವರ ತಂಡದವರಿಗೆ, ಜಿಲ್ಲಾ,3170-ರೋ, ಪಿಡಿಜಿ, ಮಾಜಿ ರಾಜ್ಯಪಾಲ ಪ್ರಾಣೇಶ ಜಹಗಿರದಾರ ಮತ್ತು ಶ್ರೀಮತಿ ವಿರಾಜ್ ಕೋಟಕ್ ಅವರು, ಪ್ರಮಾಣವಚನ ಬೋಧಿಸುವರು. ಮುಖ್ಯ ಅತಿಥಿಗಳಾಗಿ, ಶಾಸಕ ಪ್ರಕಾಶ್ ಕೋಳಿವಾಡ,ಸಹಾಯಕ ರಾಜ್ಯಪಾಲ ಬ್ಯಾಡಗಿಯ ಮಂಜುನಾಥ ಉಪ್ಪಾರ ಮತ್ತಿತರರು ಪಾಲ್ಗೊಳ್ಳುವರು. ಎಂದು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ, ರೋಟರಿ ಸೇವಾ ಸಂಸ್ಥೆಯ, ಮಾಜಿ ಅಧ್ಯಕ್ಷ ಜಯಣ್ಣ ಜಂಬಿಗಿ, ಪುಟ್ಟರಾಜ ಅಂಗಡಿ, ಸಂಜನಾ ಕುರುವತ್ತಿ, ಪ್ರಮೀಳಾ ಜಂಬಿಗಿ, ಶಂಕರಗೌಡ ಮಾಳಗಿ, ಜಿ.ಜಿ.ಹೊಟ್ಟಿಗೌಡ್ರ, ಜಗದೀಶ್ ಕಲ್ಯಾಣಿ, ವಿನೋದ ಜಂಬಿಗಿ, ಶೋಭಾ ಜಂಬಿಗಿ, ವಿ.ಪಿ. ಪೊಲೀಸ್ ಗೌಡ್ರ, ಎಂ.ಆರ್. ಪಾಟೀಲ್, ಸೇರಿದಂತೆ ಸಂಸ್ಥೆಯ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು