ರಾಣೆಬೆನ್ನೂರ

ಸಮ-ಸಮಾದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ: ಕೈರನ್ನ

ಸಮ-ಸಮಾದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ: ಕೈರನ್ನ

ಲಯನ್ಸ್ ಸೇವಾ ಸಂಸ್ಥೆ: ಪದಾಧಿಕಾರಿಗಳ ಪದಗ್ರಹಣ

ರಾಣೇಬೆನ್ನೂರು 28: ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ, ಪ್ರತಿಯೊಬ್ಬ ನಾಗರಿಕರು ಪರಸ್ಪರ ಸಹಾಯ ಸಹಕಾರ ಮತ್ತು ಸೇವಾ ಭಾವನೆ ಹೊಂದಿರಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಎಂ ಜೆ ಎಫ್, ಲ : ಎಸ್. ಜೆ. ಕೈರನ್ನ ಹೇಳಿದರು.      

ಲಯನ್ಸ್ ಶಾಲಾ ಭವನದಲ್ಲಿ ನಡೆದ 2023-24ನೇ ಸಾಲಿನ ನೂತನ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಮತ್ತವರ ತಂಡದವರಿಗೆ ಸೇವಾ ದಿಕ್ಷೆ ನೀಡಿ ಮಾತನಾಡಿದರು.   

       ಲಯನ್ಸ್ ಸೇವಾ ಸಂಸ್ಥೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ತನ್ನ ಸಾಮಾಜಿಕ ಸೇವೆ ಸಲ್ಲಿಸುತ್ತಲಿದೆ, ಇದು ಸೇವಾ ಸಂಸ್ಥೆ ಹೊರತು, ಶ್ರೀಮಂತರ ಮೋಜು ಮಸ್ತಿಗೆ ಆಡಂಬರಕ್ಕೆ ಮೀಸಲಾಗಿವೆ ಎನ್ನುವ ತಪ್ಪು ಕಲ್ಪನೆ ಒಂದು ಕಾಲದಲ್ಲಿ ಇತ್ತು. ಸಾರ್ವಜನಿಕ ಸೇವೆಯಲ್ಲಿರುವ ಲಯನ್ಸ್  ಸಂಸ್ಥೆಗಳ  ಕಾರ್ಯವನ್ನು  ಅರ್ಥ ಮಾಡಿಕೊಂಡಿದ್ದಾರೆ ಹೀಗಾಗಿ ಪ್ರತಿಯೊಬ್ಬ ನಾಗರಿಕರು, ಇಂದು ಸಮಾಜ ಸೇವೆಗೆ ಮುಂದಾಗುತ್ತಿರುವುದು ದೇಶದ ಮತ್ತು ನಾಡಿನ ಅಭಿವೃದ್ಧಿ ಸಂಕೇತವಾಗಿದೆ ಎಂದರು.     

      ಅಧ್ಯಕ್ಷತೆ ವಹಿಸಿದ್ದ  ಅಧ್ಯಕ್ಷ ಮಹೇಶ್ ಅಡಿವೆಪ್ಪನವರ, ಅವರು ಅಧಿಕಾರವನ್ನು ಹಸ್ತಾಂತರಿಸಿ ತಮ್ಮ ಅವಧಿಯಲ್ಲಿ  ಅವಧಿಯಲ್ಲಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಜೈಪುರ್ ಕಾಲುಗಳ ಜೋಡಣೆ, ಬಡವರಿಗೆ ದೀನ ದಲಿತರಿಗೆ ಅನೇಕ ರೀತಿಯ ಸಹಾಯ ಸಹಕಾರ ನೀಡುವುದರ ಮೂಲಕ ಸರ್ವ ಸದಸ್ಯರ ಸಹಕಾರದಿಂದ, ಮಾನಸಿಕ ನೆಮ್ಮದಿಯನ್ನು ಪಡೆದುಕೊಂಡಿದ್ದೇನೆ ಎಂದರು.  ನೂತನ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅವರು, ಸೇವೆಗೆ ತನ್ನದೇ ಆದಂತಹ ಮಹತ್ವವಿದೆ. ಸಮಾಜದಲ್ಲಿ ಎಲ್ಲರೂ ಶ್ರೀಮಂತರೇ ಇಲ್ಲ. ಬಡವರೂ ಸಹ ಅಧಿಕ ಪ್ರಮಾಣದಲ್ಲಿದ್ದಾರೆ, ಅಂಥವರ ಸೇವೆಯಿಂದ ಪುಣ್ಯವನ್ನು ಸಂಪಾದಿಸಲು ಇದೊಂದು ಅವಕಾಶವಾಗಿದೆ ಎಂದರು.   ಸಾಮಾಜಿಕ ಕಳಕಳಿಯೇ ಲಯನ್ ಸೇವಾ ಸಂಸ್ಥೆಯ ಮುಖ್ಯ ಗುರಿಯಾಗಿರುವುದನ್ನು ತಾವು ಮನಗಂಡಿದ್ದೇವೆ, ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶವನ್ನು ದೊರಕಿಸುವ ಉದ್ದೇಶವನ್ನು ಕೊಂಡಿದ್ದೇನೆ ಅದಕ್ಕಾಗಿ ಎಲ್ಲಾ ಸದಸ್ಯರ ಸಹಾಯವನ್ನು ಬಯಸುತ್ತೇನೆ ಎಂದರು. ಕಾರ್ಯದರ್ಶಿ ಕಿರಣ್ ಕುಮಾರ್ ಅಂತರವಳ್ಳಿ ಕೋಶಾಧ್ಯಕ್ಷ ಹುಚ್ಚಪ್ಪ ಹಳೆಮನಿ, ಸೇರಿ  ನೂತನವಾಗಿ ಸೇರ್ಪಡೆಗೊಂಡ ಹೊಸ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.      

    ಸಮಾರಂಭದಲ್ಲಿ ಎಂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ, ಎಂ ಜೆ ಎಫ್ ಲ, ಎನ್.ಎಸ್ ಕುಲಕರ್ಣಿ, ಮಾಜಿ ಅಧ್ಯಕ್ಷರಾದ, ಟಿ ವೀರಣ್ಣ, ಅಶೋಕ್ ಹೊಟ್ಟೆಗೌಡ್ರ, ಬಿ.ಎನ್.ಪಾಟೀಲ್, ಜಯಣ್ಣ ಮುಚಡಿ, ಬಸವರಾಜ ಬಡಿಗೇರ್, ಟಿ.ಸಿ. ಪಾಟೀಲ್, ಶಿವಾನಂದ್ ಸಂಗಾಪುರ್, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಪದಾಧಿಕಾರಿಗಳಿಗೆ ನಗರದ ಅನೇಕ ಸಂಘ ಸಂಸ್ಥೆಗಳು ಅಭಿನಂದಿಸಿ ಶುಭ ಕೋರಿದರು. ಶಿಕ್ಷಕಿ ಬನಶ್ರೀ ಸಂಗಡಿಗರು  ಪ್ರಾರ್ಥಿಸಿದರು. ಶಿಕ್ಷಕ ಆರ್ ವಿ ಸುರಗೊಂಡ  ಸ್ವಾಗತಿಸಿ, ನಿರೂಪಿಸಿದರು.  ಎಂ.ಎಸ್. ಪಾಟೀಲ್ ವಂದಿಸಿದರು.ಊ28-ಖಓಖ02-ನ್ಯೂಸ್. ಅಂಡ್. ಫೋಟೊ 

ಸುದ್ದಿ ಓದಿ