ಸಿರುಗುಪ್ಪ

ನಾಗರಾಜರಿಂದ ಸೌಹಾರ್ದದ ರೋಜಾ ಇಫ್ತಾರ್ ಕೂಟ

ನಾಗರಾಜರಿಂದ ಸೌಹಾರ್ದದ ರೋಜಾ ಇಫ್ತಾರ್ ಕೂಟ

ಸಿರುಗುಪ್ಪ 22: ನಗರದ ಸೌದಾಗರ್ ಜುಮ್ಮಾ ಸುನ್ನಿ ಮಸೀದಿಯಲ್ಲಿ ಪವಿತ್ರ ಮಾಸ ರಂಜಾನ್ ಮುಬಾರಕ್ ಪ್ರಯುಕ್ತ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಸೇವಾಕರ್ತ ಆರ್ಯವೈಶ್ಯ ಸಮುದಾಯದ ನಾಗರಾಜ ಶೆಟ್ಟಿಯವರು ಸೌಹಾರ್ದತೆಯ ರೋಜಾ ಇಫ್ತಾರ್ ಕೂಟ ಆಯೋಜಿಸಿದ್ದರು.  

ಮಸೀದಿಯ ಮೌಲಾನಾ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಅವರು ಮಾತನಾಡುತ್ತಾ ಪ್ರತಿಯೊಬ್ಬರೂ ಜಾತಿ ಧರ್ಮ ಸೌಹಾರ್ದತೆಯಿಂದ ಗೌರವಿಸುವದು ಸರ್ವಧರ್ಮೀಯರು ಜೀವಿಸುವುದು ಅಲ್ಲಾಹನ ಪ್ರವಾದಿ ಯರು ಜಗದ್ಗುರುಗಳು ಶರಣರು ಹಿರಿಯರು ಮನುಕುಲಕ್ಕೆ ನೀಡಿರುವ ಮಾರ್ಗದರ್ಶನ ಬೇರೆ ಬೇರೆ ಯಾದರೂ ಭಾವನೆಗಳು ಒಂದೇ ಎಲ್ಲರಿಗೂ ಒಳ್ಳೆಯದಾಗಲಿ ಎಂದು ದುವಾ ಆಶೀರ್ವಚನ ಮಾಡಿದರು.  

ಮಸೀದಿ ಅಧ್ಯಕ್ಷ ಮಕಾಂದಾರ್ ಮಹಬೂಬ್ ಬಾಷಾ, ಖತೀಬ್ ಜಹೀರುದ್ದೀನ್ ಬಾಬು, ಡಾ ಮೊಹಮ್ಮದ್ ಅಲಿ, ಮಸೀದಿ ಗೌರವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಹಂಡಿ  ಹಾಶಿಮ್ ಹಾಜಿ, ಎ ಅಬ್ದುಲ್ ನಬಿ, ಮೊಹಮ್ಮದ್ ನೌಶಾದ್ ಅಲಿ, ಮೌಜನ್ ಕೆಎಂ ಹೊನ್ನೂರ್ ವಲಿ, ಸಮಾಜದ ಬಾಂಧವರು ರೋಜಾ ಇಫ್ತಾರ್ ನಲ್ಲಿ ಭಾಗವಹಿಸಿ ದುವಾ ಮಾಡಿದರು. 


ಸುದ್ದಿ ಓದಿ