ಅಥಣಿ

ಪ್ರವಾಹದಿಂದ ರಸ್ತೆ ಹಾಳು: ಕುಮಠಳ್ಳಿ ಪರೀಶೀಲನೆ

ಪ್ರವಾಹದಿಂದ ರಸ್ತೆ ಹಾಳು: ಕುಮಠಳ್ಳಿ ಪರೀಶೀಲನೆ

ಅಥಣಿ 09: ಕೃಷ್ಣಾ ನದಿಯ ಸಂತ್ರಸ್ತರು ಯಾವುದೇ ಕಾರಣಕ್ಕೂ ನಿಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ನಿಮ್ಮ ನೆರವಿಗೆ ಸರಕಾರ ಬದ್ಧವಾಗಿದೆ, ನದಿಯ ರಭಸಕ್ಕೆ ಹಾಳಾದ ರಸ್ತೆ, ವಿದ್ಯುತ್ ಟ್ರಾನ್ಸಮರ, ಮನೆ ಸೇರಿದಂತೆ ಎಲ್ಲವುಗಳನ್ನು ಸರಿಪಡಿಸಿ ಕೊಡಲಾಗುವುದು. ನಾನು ನಿಮ್ಮ ಕುಟುಂಬದ ಸದಸ್ಯನಾಗಿ ಎಲ್ಲರ  ಕಷ್ಟದಲ್ಲಿ ಪಾಲ್ಗೊಳ್ಳುತ್ತನೆ ಎಂದು ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.  

ತಾಲೂಕಿನ ಶೇಗುಣಸಿ ಗ್ರಾಮದಲ್ಲಿ  ಕೃಷ್ಣಾ ನದಿ ಪ್ರವಾಹಕ್ಕೆ ಕಿತ್ತು ಹೋದ ರಸ್ತೆ  ಪರೀಶೀಲನೆ ಮಾಡಿ ಅವರು ಮಾತನಾಡುತ್ತಾ  ಕ್ಷೇತ್ರದ ಅಭಿವೃದ್ದಿ ಒಂದೇ ನನ್ನ ಕನಸಾಗಿದೆ. ಈಗಾಗಲೇ ಅನೇಕ ಯೋಜನೆಗಳನ್ನು ಅಥಣಿ ಮತ ಕ್ಷೇತ್ರಕ್ಕೆ ತಂದು ಅಭಿವೃದ್ದಿ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದ ಅವರು ಪ್ರವಾಹ ಬಂದ ದಿನವೇ ಎಲ್ಲ ಕಾಳಜಿ ಕೇಂದ್ರಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇನೆ. ಅಗತ್ಯ ಇರುವ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಕ್ಷೇತ್ರದಿಂದ ಕೆಲಸದ ನಿಮಿತ್ಯ ತೆರಳಿದ್ದೆ ಮತ್ತೆ ನಿಮ್ಮ ಸೇವೆಗಾಗಿ ಬಂದಿದ್ದೇನೆ, ಅಧಿಕಾರಿಗಳು ಮಳೆ ಚಳಿಯನ್ನದೆ ನಿರಂತರವಾಗಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಅವರು ಹೇಳಿದರು.  

ಅಥಣಿ ತಹಸೀಲ್ದಾರ ದುಂಡಪ್ಪ ಕೋಮಾರ, ತಾ.ಪಂ. ಇ. ಒ ಶೇಖರ ಕರಿಬಸಪ್ಪನವರ, ಪಿಎಸ್‌ಐ ಕುಮಾರ ಹಾಡಕಾರ,  ಲೋಕೋಪಯೋಗಿ ಇಲಾಖೆಯ ಗೌಡಪ್ಪ ಗುಳಪ್ಪನವರ, ಎ.ಜಿ. ಮುಲ್ಲಾ, ಮಲ್ಲಿಕಾರ್ಜುನ ಮಗದುಮ್ಮ, ಈರಣ್ಣ ವಾಲಿ, ಗ್ರೇಡ್ 2 ತಹಸೀಲ್ದಾರ ಮಹಾದೇವ ಬಿರಾದಾರ, ಕಂದಾಯ ವೃತ್ತ ನೀರೀಕ್ಷಕ ಶಿವಾನಂದ ಮೆಣಸಂಗಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಶೇಗುಣಸಿ, ದರೂರ , ಸಂಕರಟ್ಟಿ, ಖವಟಕೊಪ್ಪ, ನದಿ ಇಂಗಳಗಾಂವ್, ತೀರ್ಥ, ಸಪ್ತ ಸಾಗರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದರು. 


ಸುದ್ದಿ ಓದಿ