ರಾಣೆಬೆನ್ನೂರ

ಬಿಸಿಎಂ ವಸತಿ ನಿಲಯದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆ

ಬಿಸಿಎಂ ವಸತಿ ನಿಲಯದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆ

ರಾಣೆಬೆನ್ನೂರು 29:  ಈ ದೇಶದ ಯುವ ಸಮುದಾಯಕ್ಕೆ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಂದಿನ ವೈಚಾರಿಕ ಚಿಂತನೆಗಳು ಮತ್ತು ಹೋರಾಟಗಳು ಇಂದು ಬಹಳಷ್ಟು ಪ್ರಸ್ತುತವಾಗಿದೆ ಎಂದು ಮಾರುತಿ ನಗರದ ಸರ್ಕಾರಿ ಪ.ಪೂ.ಕಾಲೇಜು ಪ್ರಾಚಾರ್ಯ ಜಿ.ಬಿ. ಬೆಳವಿಗಿ ಹೇಳಿದರು. ಅವರು ಬುಧವಾರ ಬಿಸಿಎಂ ವಸತಿ ನಿಲಯದಲ್ಲಿಆಯೋಜಿಸಿದ್ದ ಯುವಜನರ ಸ್ಫೂರ್ತಿ, ಕಾಮ್ರೇಡ್  ಭಗತ್ ಸಿಂಗ್ ಅವರ 115ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಭಗತ್ ಸಿಂಗ್ ತಮ್ಮ ಬಾಲ್ಯದ ಕೇವಲ 12 ವರ್ಷಗಳಲ್ಲಿ ಮಹಾತ್ಮ ಗಾಂಧೀಜಿಯವರ ಅಸಹಕಾರ ಮತ್ತು ಸ್ವದೇಶಿ  ಚಳುವಳಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ನಮ್ಮ ಇಂದಿನ ಯುವ ಜನಾಂಗವು, ಅವರ ಆದರ್ಶಗಳನ್ನು, ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಮೇಲ್ವಿಚಾರಕರಾದ,ಶಾಂತಪ್ಪ ಸಾಹುಕಾರ,ಲಕ್ಷ್ಮಣ್ ಚವಾಣ, ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಉಪಾಧ್ಯಕ್ಷ ಕಲ್ಲಪ್ಪ ಕುದುರಿಹಾಳ್, ರವಿ ಹಲವಾಗಲ, ನೇಹಲ್ ಖಾನ್, ಆಕಾಶ್,  ಹರ್ಷ, ಬಸವರಾಜ  ಬಿ, ದೀಲೀಪ್  ಹೆಚ್, ವೆಂಕಟೇಶ್  ಎಸ್, ಸಿದ್ದಪ್ಪ, ಗಣೇಶ  ಎಲ್, ಚಂದ್ರ​‍್ಪ ಆರ್‌ಎಲ್, ವೀರೇಶ್  ಎ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ