ಕಾಗವಾಡ

ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ ಶ್ಲಾಘನೀಯ: ಪೂಜಾರಿ

ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ ಶ್ಲಾಘನೀಯ: ಪೂಜಾರಿ

ಕಾಗವಾಡ 13: ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಯನ್ನು ಹಮ್ಮಿಕೊಂಡಿದೆ. ಸದರಿ ಯೋಜನೆ ಶ್ಲಾಘನೀಯವಾಗಿದೆ ಎಂದು ಮಂಗಸೂಳಿಯ ಮಾಜಿ ಜಿ.ಪಂ ಸದಸ್ಯ ಹಾಲಿ ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ ಹೇಳಿದರು. 

ಶನಿವಾರ ದಿ. 12ರಂದು ಮಂಗಸೂಳಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಪಿ.ಎಂ. ಕಾಂಬಳೆ ಇವರಿಂದ ಗ್ರಾಮದಲ್ಲಿಯ ಜನರ ಪಹಣಿ ಪತ್ರಗಳು ರವೀಂದ್ರ ಪೂಜಾರಿ ಇವರಿಂದ ಮನೆ ಬಾಗಲಿಗೆ ಹೋಗಿ ಹಂಚಲಾಯಿತು. ಸರ್ಕಾರದ ಹೊಸ ಯೋಜನೆ ಆಗಿರುವ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯಶಸ್ವಿ ಗೊಳಿಸಲಾಯಿತು. 

ಕಾರ್ಯಕ್ರಮದಲ್ಲಿ ಮಂಗಸುಳಿ ಗ್ರಾ ಪಂ. ಸಧ್ಯಸೆರಾದ ಅಮರ ಪಾಟೀಲ್, ಬಾಬಾಸಾಹೇಬ ಪಟೀಲ್, ಧನಾಜಿ ಪಾಟೀಲ್, ಗಣಪತಿ ಮಾಳಿ, ಹೇಮಂತ ಇನಾಮದಾರ, ಪ್ರಶಾಂತ ಪಾಟೀಲ್, ಪಿ.ಡಿ.ಒ ಎಂ.ಜಿ. ಹೀರೆಮಠ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ