ಕೇಕ್ ಕತ್ತರಿಸಿ, ಸಸಿ ನೆಟ್ಟು ಅದ್ದೂರಿಯಾಗಿ ಕಂದಾಯ ದಿನ ಆಚರಣೆ
ಕಾಗವಾಡ 03: ಕಾಗವಾಡ ತಹಶೀಲ್ದಾರ ಕಚೇರಿಯಲ್ಲಿ ಬೆಳಗಾವಿ ಅಪ್ಪರ್ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಇವರಿಂದ ಕೇಕ್ ಕತ್ತರಿಸಿ, ಸಸಿ ನೆಡುವದೊಂದಿಗೆ ಕಂದಾಯ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು.
ಶುಕ್ರವಾರ ರಂದು ಕಾಗವಾಡ ತಹಶೀಲ್ದಾರ್ ಕಚೇರಿಯಲ್ಲಿ ಚಿಕ್ಕೋಡಿ ಕಂದಾಯ ಜಿಲ್ಲಾ ವಿಭಾಗಿಯ ಅಧಿಕಾರಿಗಳಾದ ಸಂತೋಷ್ ಕಾಮಗೌಡ, ತಹಸಿಲ್ದಾರ್ ರಾಜೇಶ್ ಬುರ್ಲಿ ಇವರ ಮುಖ್ಯ ಉಪಸ್ಥಿತಿಯಲ್ಲಿ ಅಪ್ಪರ್ ಜಿಲ್ಲಾಧಿಕಾರಿಗಳು ಕೇಕ ಕತ್ತರಿಸಿ ಸಂತೋಷದಿಂದ ಕಂದಾಯ ದಿನಾಚರಣೆ ಆಚರಿಸಿದರು. ಉಭಯ ಅಧಿಕಾರಿಗಳಿಂದ ಸಸಿ ನೆಡುವ ಕಾರ್ಯಕ್ರಮ ನೆರವೇರಿತು.
ಅಪ್ಪರ್ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಕಂದಾಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ ಕಂದಾಯ ಇಲಾಖೆಯ ಜವಾಬ್ದಾರಿ ಬಹಳಷ್ಟು ಇದೆ. ನಮ್ಮ ಬಳಿ ಕೆಲಸದ ನಿಮಿತ್ಯ ಗ್ರಾಮದಲ್ಲಿಯೇ ರೈತರು, ಸಾಮಾನ್ಯ ಜನರು ಕೆಲಸದ ನಿಮಿತ್ಯ ಬರುತ್ತಾರೆ. ಅವರಿಗೆ ಒಳ್ಳೆಯ ಸೌಜನ್ಯತೆಯಿಂದ ಮಾತನಾಡಿ ಅವರ ಕೆಲಸಕ್ಕೆ ಸ್ಪಂದಿಸಬೇಕು. ಗ್ರಾಮದಲ್ಲಿ ಹೆಚ್ಚಿನ ಜವಾಬ್ದಾರಿ ಗ್ರಾಮ ಲೆಕ್ಕಾಧಿಕಾರಿಗಳದ್ದು ಇರುತ್ತದೆ. ಅವರು ಯಾವ ರೀತಿ ಸೇವೆ ನೀಡುತ್ತಾರೆ ಅದರ ಮೇಲೆ ಇಲಾಖೆಗೆ ಒಳ್ಳೆಯದು ಕೆಟ್ಟದು ಹೆಸರು ಬರುತ್ತದೆ. ಆದ್ದರಿಂದ ತಾವೆಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರಿ ಎಂಬ ವಿಶ್ವಾಸವಿದೆ ಎಂದರು.
ಇದೇ ರೀತಿ ಚಿಕ್ಕೋಡಿ ಎಸಿ ಸಂತೋಷ್ ಕಾಮಗೌಡ ಮಾರ್ದರ್ಶನ ನೀಡಿದರು. ತಹಸಿಲ್ದಾರ್ ರಾಜೇಶ್ ಬುರ್ಲಿ ಇವರು ಅಧಿಕಾರಿಗಳಿಗೆ ಸನ್ಮಾನಿಸಿ ಅವರ ನೀಡಿರುವ ಕೆಲ ಸೂಚನೆಗಳು ತಾವು ಕಟ್ಟುನಿಟ್ಟುವಾಗಿ ಪಾಲಿಸಿ ಇಲಾಖೆಗೆ ಒಳ್ಳೆಯ ಹೆಸರು ತರುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಗ್ರೇಡ್ 2 ತಹಶೀಲ್ದಾರ್ ಎಸ್.ಡಿ.ಅಸುಧೆ, ಉಪತಹಸಿಲ್ದಾರ್ ಅಣ್ಣಾಸಾಹೇಬ್ ಕೊರೆ, ಕಂದಾಯ ನೀರೀಕ್ಷೆ ಎಸ್.ಬಿ.ಮುಲ್ಲಾ, ಸಿ.ಎಸ್.ಕಬಾಡಗೆ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.