ನಿವೃತ್ತಿ: ಕೃಷಿ ಸಹಾಯಕ ಅಧಿಕಾರಿ ಶಾಂತಪ್ಪ ಹೊಸಮನಿಗೆ ಬೀಳ್ಕೊಡುಗೆ
ಕಾಗವಾಡ 01: ಸೇವಾ ಅವಧಿಯಲ್ಲಿ ನಾವು ಸಾರ್ವಜನಿಕರ ಸುಖ ದುಃಖಕ್ಕೆ ಸ್ಪಂದಿಸಿ ಈ ಸೇವೆ ಈಶ್ವರ ಸೇವೆಯೆಂದು ಕಾರ್ಯನಿರ್ವಹಿಸಬೇಕು. ಹಾಗೆ ಕಾಗವಾಡದ ಕೃಷಿ ಸಹಾಯಕ ಅಧಿಕಾರಿ ಶಾಂತಪ್ಪ ಹೊಸಮನಿ ನಿರ್ವಹಿಸಿದ್ದಾರೆ ಎಂದು ಅಥಣಿ ತಾಲೂಕ ಕೃಷಿ ನಿದರ್ೇಶಕ ನಿಂಗಣ್ಣ ಬಿರಾದಾರ್ ಹೇಳಿದರು.
ಮಂಗಳವಾರ ದಂದು ಕಾಗವಾಡ ತಾಲೂಕಿನ ಕೃಷಿ ಸಹಾಯಕ ಅಧಿಕಾರಿ ಶಾಂತಪ್ಪ ಹೊಸಮನಿ ನಿವೃತ್ತಿ ಹೊಂದಿದ ನಿಮಿತ್ತ ಸನ್ಮಾನಿಸಿ ಬೀಳ್ಕೊಟ್ಟು ಮಾತನಾಡಿದ ಅವರು ಶಾಂತಪ್ಪ ಹೊಸಮನಿ ಇವರು ಶಾಂತ, ಸರಳ ಸ್ವಭಾವದವರು. ಸಕರ್ಾರದ ಎಲ್ಲ ಸವಲತ್ತುಗಳು ಪ್ರತಿಯೊಬ್ಬರಿಗೆ ಮುಟ್ಟಿಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊಸಮನಿ ನನ್ನ ಸೇವೆ ನನಗೆ ತೃಪ್ತಿ ತಂದಿದೆ ಎಂದು ಹೇಳಿ ಎಲ್ಲ ರೈತ ಬಾಂಧವರಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿಗಳಾದ ನಾಮದೇವ್ ಲಮಾಣಿ, ಆರ್.ಎಸ್.ಬಂಗಾರಿ, ಮುತ್ತಣ್ಣ ನ್ಯಾಮಗೌಡರ, ರಮೇಶ್ ಚೌಗುಲಾ, ಮುತ್ತಪ್ಪ ಕಡಪಟ್ಟಿ, ಉಗಾರದ ವಿನಾಯಕ್ ಭಂಡಾರ್ಕರ್, ಪ್ರವೀಣ್ ಹೊಸಮನಿ ಸೇರಿದಂತೆ ಅನೇಕರು ಇದ್ದರು