ನಿವೃತ್ತಿ: ಎಎಸ್ಐ ರಾಮ ಹೊರಟ್ಟಿಗೆ ಬೀಳ್ಕೊಡುಗೆ
ಕಾಗವಾಡ 02: ಕಾಗವಾಡ ಪೊಲೀಸ್ ಠಾಣೆ ಎಎಸ್ಐ ರಾಮ ಲಕ್ಷ್ಮಣ ಹೊರಟ್ಟಿ ಇವರು 35 ವರ್ಷ ಸೇವೆಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ್ದರಿಂದ ಅಥಣಿ ಸಿಪಿಐ ಶಂಕರ್ಗೌಡ ಪಾಟೀಲ್ ಇವರು ಹೊರಟ್ಟಿ ದಂಪತಿಗಳಿಗೆ ಸನ್ಮಾನಿಸಿ ಬೀಳ್ಕೊಟ್ಟರು.
ಪಿಎಸ್ಐ ಬಿ.ಎಂ.ರಬಕವಿ ಇವರು ಎಎಸ್ಐ ರಾಮ ಲಕ್ಷ್ಮಣ ಹೊರಟ್ಟಿ ಇವರು ಚಿಕ್ಕೋಡಿ ತಾಲೂಕಿನ ಚಿಕ್ಕಲಹಾಳ ಗ್ರಾಮದವರು 1988ರಲ್ಲಿ ಪೋಲಿಸ ಇಲಾಖೆಯಲ್ಲಿ ಸೇವೆ ಪ್ರಾಂಭಿಸಿ ಹುಕ್ಕೇರಿ, ಬೆಳಗಾವಿ ಖಡೆಬಾಜಾರ್, ನಿಪ್ಪಾನಿ, ಹಾರೂಗೇರಿ, ಕುಡುಚಿ, ಕಾಗವಾಡ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. ಹತ್ತು ವರ್ಷ ಕಾಗವಾಡ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಎಎಸ್ಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ.
ಸಿಪಿಐ ಶಂಕರ್ಗೌಡ ಪಾಟೀಲ್ ಇವರು ಹೊರಟ್ಟಿ ಅವರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಎಸ್ಐ ರಾಮ ಲಕ್ಷ್ಮಣ ಹೊರಟ್ಟಿ ಅವರು ಸೇವಾ ಅವಧಿಯಲ್ಲಿ ನಾನು ಯಾರ ಮನಸ್ಸನ್ನು ನೋಯಿಸಿದರೆ ನನ್ನ ಕ್ಷಮಿಸಿರಿ ಎಂದು ಹೇಳಿ ಅವರಿಗೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು.
ಎಎಸ್ಐ ಹೊರಟ್ಟಿ ಅವರ ಅಭಿಮಾನಿಗಳು ಕಾಗವಾಡ ಪೊಲೀಸ್ ಠಾಣೆ ಎಲ್ಲ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.