ರಾಣೆಬೆನ್ನೂರ

ಸಂಶೋಧನೆಗೆ ಆಳವಾದ ಅಧ್ಯಯನ ಅಗತ್ಯ: ಡಾ. ಗಿರಿಧರ

ಸಂಶೋಧನೆಗೆ ಆಳವಾದ ಅಧ್ಯಯನ ಅಗತ್ಯ: ಡಾ. ಗಿರಿಧರ

ರಾಣೇಬೆನ್ನೂರಲ್ಲಿ ವಾಣಿಜ್ಯ ಶಾಸ್ತ್ರ ಸಂಶೋಧನಾ ಕಾರ್ಯಗಾರ

ರಾಣೇಬೆನ್ನೂರು: ಯಾವುದೇ ವಿಷಯಗಳ ಕುರಿತು ಸಂಶೋಧನೆ ನಡೆಯಬೇಕಾದರೂ ಸಹ ಮೊದಲು ಅದರ ಅರ್ಥವನ್ನು ತಿಳಿದುಕೊಂಡಿರಬೇಕು. ಮತ್ತು ಆ ವಿಷಯಗಳ ಕುರಿತು ಆಳವಾದ ಅಧ್ಯಯನ ಹೊಂದಿರಬೇಕು ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ: ವಿ. ಗಿರಿಧರ ಹೇಳಿದರು.        

ಅವರು ನಗರದ ಎಸ್‌. ಜೆ.ಎಂ ವಿ. ಬಿ.ಎ.ಜೆ ಎಸ್‌. ಎಸ್‌. ಕಲಾ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ, ಆಯೋಜಿಸಲಾಗಿದ್ದ, ಸಂಶೋಧನಾ ಪದ್ಧತಿ ವಿಷಯ ಕುರಿತು  ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ವ್ಯವಸ್ಥೆಯಲ್ಲಿ ಎಲ್ಲ ಹಂತದಲ್ಲಿಯೂ ಹೊಸ ಹೊಸ ಆವಿಸ್ಕಾರಗಳ ಮತ್ತು ವಿಷಯಗಳ ಕುರಿತಂತೆ ವಿವಿಧ ರೀತಿಯಲ್ಲಿ ಸಂಶೋಧನೆಗಳು ನಡೆಯುತ್ತಲಿವೆ. ಆಯಾ ವಿಷಯಗಳಲ್ಲಿ ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ, ಯಾವುದೇ ವಿಷಯಗಳಿರಲಿ ಅದರಲ್ಲಿ ಪರಿಪೂರ್ಣವಾದ ಪ್ರಬುದ್ಧತೆಯನ್ನು ಸಾಧಿಸಲು ಸಾಧ್ಯವಾಗುವುದು ಎಂದರು.            

ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಡಾ: ಆರ್‌. ವಿ. ಹೆಗಡಾಳ ಅವರು ಸಂಶೋಧನೆಗೆ ಹಳತರ ಜೊತೆಗೆ ಹೊಸ,ಹೊಸ ಆವಿಷ್ಕಾರಗಳ ವಿಷಯಗಳು ಬಹು ಸಹಕಾರಿಯಾಗಲಿವೆ. ಅಧ್ಯಯನ ಎಂದಿಗೂ ನಿಂತ ನೀರಲ್ಲ  ವಿದ್ಯಾರ್ಥಿಗಳು ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಸಂಶೋಧನೆಯಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುವುದು ಮತ್ತು ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ   ಎಂದರು. ವಿದ್ಯಾರ್ಥಿ ಒಕ್ಕೂಟದ ಚೇರ್ಮನ್ ಡಾ:ಎಂ. ರಾಜಶೇಖರ​‍್ಪ ಅವರು ಮಾತನಾಡಿ, ಮಾಹಿತಿ ಮಾರ್ಗದರ್ಶನ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ: ಬಿ. ಆರ್‌. ಡಮ್ಮಳ್ಳಿ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ಏಕೈಕ ಉದ್ದೇಶದಿಂದ ಕಾರ್ಯಗಾರವನ್ನು ಆಯೋಜಿಸಲಾಗಿದೆ, ವಿದ್ಯಾರ್ಥಿಗಳು ಸಮರ​‍್ಕವಾಗಿ ಇದರ ಪ್ರಯೋಜನವನ್ನು ಪಡೆದುಕೊಂಡು, ಸಾಧನೆ ಮೆರೆಯಬೇಕು  ಎಂದು ಕರೆ ನೀಡಿದರು.  

ಕಾರ್ಯಗಾರವನ್ನು ಮಹಿಳಾ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶವು ಸಂಯೋಜಿಸಿತ್ತು. ವೇದಿಕೆಯಲ್ಲಿ ಮಹಾವಿದ್ಯಾಲಯದ ವಿಷಯ ಉಪನ್ಯಾಸಕರು, ಮತ್ತು ಗಣ್ಯರು ಉಪಸ್ಥಿತರಿದ್ದರು.ಕು, ಸುಜಾತಾ ಸಂಗಡಿಗರು ಪ್ರಾರ್ಥಿಸಿದರು.   ಕು. ಅಶ್ವೀನಿ ಪಿ.ಲಮಾಣಿ , ಸ್ವಾಗತಿಸಿ, ಕು. ಲತಾ ನರಸರೆಡ್ಡಿ ನಿರೂಪಿಸಿ, ನಾಗರತ್ನ ಪುಗಟಿ, ವಂದಿಸಿದರು. 


ಸುದ್ದಿ ಓದಿ