ಬೈಲಹೊಂಗಲ

ಹೊರರಾಜ್ಯದಿಂದ ಬರುವ ವ್ಯಾಪಾರಸ್ಥರಿಗೆ ಉದ್ಯೋಗ ಪರವಾನಿಗೆ ನೀಡದಿರಲು ಮನವಿ

ಹೊರರಾಜ್ಯದಿಂದ ಬರುವ ವ್ಯಾಪಾರಸ್ಥರಿಗೆ ಉದ್ಯೋಗ ಪರವಾನಿಗೆ ನೀಡದಿರಲು ಮನವಿ

ಲೋಕದರ್ಶನ ವರದಿ 


ಬೈಲಹೊಂಗಲ 14: ಹೊರರಾಜ್ಯದಿಂದ ಬರುವ ವ್ಯಾಪಾರಸ್ಥರಿಗೆ ಉದ್ಯೋಗ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಸಮೀಪದ ಖನಗಾಂವ ಗ್ರಾಮದ ಸ್ಥಳಿಯ ವರ್ತಕರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಪಿಡಿಒ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಿಗೆ, ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. 

         ಕೋವಿಡ್‌ನಿಂದಾಗಿ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಎಲ್ಲ 

ವ್ಯಾಪಾರಸ್ಥರು ಆರ್ಥಿಕ  ನಷ್ಟ ಅನುಭವಿಸುತ್ತಿದ್ದು, ಪಡೆದ ಸಾಲ ಮರುಪಾವತಿಗೆ ಸಾಧ್ಯವಾಗುತ್ತಿಲ್ಲ. 

ಇಂತಹ ಕಠಿಣ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದಂತಹ ವ್ಯಕ್ತಿಗಳಿಗೆ ಉದ್ಯೋಗವಕಾಶ 

ನೀಡಿದರೆ ಸ್ಥಳಿಯ ವ್ಯಾಪಾರಸ್ಥರಿಗೆ ಮತ್ತು ಅದರ ಅವಲಂಬಿತ ಕುಟುಂಬಗಳಿಗೆ ತೊಂದರೆ 

ಆಗುತ್ತಿದ್ದು ಹೀಗಾಗಿ ಸ್ಥಳಿಯ ವ್ಯಾಪಾರಿಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಾಗೂ 

ಹೊರರಾಜ್ಯದವರಿಗೆ ಸ್ಥಳಿಕರೊಡನೆ ಪಾಲುದಾರಿಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು 

ಮನವಿಯಲ್ಲಿ ತಿಳಿಸಲಾಗಿದೆ. 


     ಗಾಪಂ.ಅಧ್ಯಕ್ಷ ರಾಜು ತಡಸನೂರ ಪಿ.ಡಿ.ಒ ಎಮ್‌.ಡಿ.ಸರಕಾವಸ, 

ಗ್ರಾಮ ಲೆಕ್ಕಾಧಿಕಾರಿ ಯು.ಎಫ್‌.ದಂಡಿನ, ಕಾರ್ಯದರ್ಶಿ ಹಾಗೂ ಸ್ಥಳೀಯ ವರ್ತಕರ ಅಭಿವೃದ್ದಿ ಸಂಘದ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ