ಇಂಡಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

ಇಂಡಿ11:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ನೂರಾರು ಅಂಗನವಾಡಿ ನೌಕರರರು ಸೋಮವಾರ ಪ್ರತಿಭಟನೆ ನಡೆಸಿ ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿ ಅಂಗನವಾಡಿ ನೌಕರರ ಅನಿರ್ಧಿಷ್ಠಾವಧಿ ಹೋರಾಟ ಕುರಿತು ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದ್ದಾರ  ಸಿದ್ದರಾಮ ಮುಜಗೊಂಡ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 

ರಾಜ್ಯದಲ್ಲಿ ಮಹಿಳೆಯರ ಮಕ್ಕಳ ಸರ್ವತೋಮುಖ ಏಳ್ಗೆಗಾಗಿ ಅಂಗನವಾಡಿ ನೌಕರರು ಶ್ರಮಿಸುತ್ತಿದ್ದಾರೆ. ಕರೋನಾ ಸಂಧರ್ಭದಲ್ಲಿ ಪ್ರಂಟ್‌ಲೈನ್ ವಾರಿಯರ‌್ಸ ಆಗಿ ದುಡಿದು ರಾಜ್ಯದಲ್ಲಿ 59 ಜನ ನೌಕರರು ಮರಣಹೊಂದಿದ್ದಾರೆ. ಇಂದು ಅಗತ್ಯೆ ವಸ್ತುಗಳ ಬೆಲೆ ದುಬಾರಿಯಾಗಿದ್ದರೂ ಸಹಿತ ವೇತನದಲ್ಲಿ ಬದಲಾವಣೆ ಆಗಿಲ್ಲ. ಆದ್ದರಿಂದ ಸರಕಾರ ಅಗನವಾಡಿಯಲ್ಲಿ ಎಲ್‌.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಬೇಕು. ಕೇಂದ್ರಗಳು ಹಳೆಯದಾಗಿರುವದರಿಂದ ಮಕ್ಕಳ ಅಕರ್ಷಣೆಯಾಗುವಂತೆ ಕಟ್ಟಡಗಳು ನಿರ್ಮಾಣ ಮಾಡಬೇಕು. ಅಂಗನವಾಡಿ ಕೇಂದ್ರ ವೇಳಾ ಪಟ್ಟಿಯಲ್ಲಿ 3 ಗಂಟೆ ಶಾಲಾ ಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಕೇಂದ್ರಗಳಲ್ಲಿ ಗುಣಾತ್ಮಕ ಮೂಲಭೂತ ಸೌಲಭ್ಯ ಒದಗಿಸಬೇಕು, 1915 ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಎಸ್‌.ಎಸ್ ಎಲ್‌.ಸಿ ಉತೀರ್ಣರಾಗಿ ಪದವಿಧರ ಆಗಿರುವದರಿಂದ ತರಬೇತಿ ನೀಡಿ ಕೇಂದ್ರಗಳಲ್ಲಿಯೇ ಅರುಣ -ಉದಯ ವರ್ಗಕ್ಕೆ ಸೀಮಿತಗೋಳಿಸಬೇಕು, ಸರಕಾರಿ ಶಾಲೆಯಲ್ಲಿ ಎಲ್‌.ಕೆ.ಜಿ ,ಯು.ಕೆ.ಜಿ ಪ್ರವೇಶ ಸ್ಥಗೀತಗೋಳಿಸಬೇಕು, ಅಂಗನವಾಡಿ ನೌಕರರನ್ನು ಐಸಿಡಿಸಿ 5 ಉದ್ದೇಶಗಳಿಗೆ ಬಿಟ್ಟು ಉಳಿದ  ಹೆಚ್ಚುವರಿ ಕೆಲಸ ನಿರ್ಭಂದಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡಬೇಕು, 3ರಿಂದ 8 ವರ್ಷದ ವರ್ಗಿಕರಣ ಕೈ ಬಿಟ್ಟು 3ರಿಂದ 6 ವರ್ಷದ ಮಕ್ಕಳು ಅಂಗನವಾಡಿಯಲ್ಲಿ ಇರುವಂತೆ ಮಾಡಬೇಕು, ಕೋಳಿಮೋಟ್ಟೆ ಆಹಾರ  ವಿತರಣೆ ಜೊತೆ ಪೂರೈಸಬೇಕು, ಅಂಗನವಾಡಿ ನೌಕರರಿಗೆ ಖಾಯಂ ಮಾಡಬೇಕು, ಮಿನಿ ಅಂಗನವಾಡಿಗಳಿಗೆ ಸಹಾಯಕಿಯರನ್ನು ಕೊಡಬೇಕು, ಮಾಡುವ ತನಕ 26 ಸಾವಿರ ವೇತನ ನೀಡಬೇಕು, ಮುಂಬಡ್ತಿ, ವರ್ಗಾವಣೆ, ಪೌಷ್ಠಿಕ ಆಹಾರ ಸರಬರಾಜು ಮಾಡುವ ಎಮ್,ಎಸ್‌.ಪಿ.ಟಿ.ಸಿ ಗಳಲ್ಲಿ ರಾಜಕೀಯ ಮಧ್ಯಪ್ರವೇಶ ಮಾಡಬಾರದು . ಅನುಕಂಪ ಆಧಾರದಲ್ಲಿ ಕೆಲಸ ಕೊಡುವಾಗ ಮಗಳು ಬದಲಿಗೆ ಸೊಸೆ ಎಂದು ಬದಲಿಸಬೇಕು ಈ ಎಲ್ಲಾ ಬೇಡಿಕೆಗಳು ಇಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಅಧ್ಯಕ್ಷ ಭಾರತಿ ವಾಲಿ, ಶೋಬಾ ಕುಂಬಾರ, ಧಾನಮ್ಮ.ಬಿ ಗುಗ್ಗರೆ, ಪದ್ಮಾವತಿ ಬಿರಾದಾರ, ಅನೀತಾ ಮಠ, ಗುರುದೇವಿ ಕಟ್ಟಿಮನಿ, ಅನುಸುಯಾ ಕುಂಬಾರ, ಸರೋಜನಿ ಜ್ಯೋಶಿ, ಶಾರದ ತಾಂಬೆ, ದ್ರಾಕ್ಷಾಯಣಿ ಅವಟಿ, ಗೀತಾ ರಾಠೋಡ, ಕಾಶಿಬಾಯಿ ಸೊಡ್ಡಿ , ಫರಜಾನ ಶೇಖ, ರೇಣುಕಾ ನಾಟೀಕಾರ, ರಾಜೇಶ್ರೀ ಪೂಜಾರಿ, ಮಹಾದೇವಿ ಡೊಂಬರ,ಶಂಕ್ರೇಮ್ಮ ಪುಟಾಣಿ, ಭಾರತಿ ಹತ್ತರಕಿ, ಅಂಬು ಮಾನೆ, ಸುಜಾತಾ ಬಿರಾದಾರ ಸೇರಿದಂತೆ ಅನೇಕ ಅಂಗನವಾಡಿ ನೌಕರರರು ಇದ್ದರು. 

11 ಇಂಡಿ02:  ಅಂಗನವಾಡಿ ನೂರಾರು ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧಾಕ್ಕೆ ತೆರಳಿ ಅಂಗನವಾಡಿ  ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ ಕಾರ್ಯಾಲಯದ ಶೀರಸ್ತೆದ್ದಾರ ಸಿದ್ರಾಮ ಮುಜಗೊಂಡ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ