ಸಿಂಧಗಿ

ಅವಿಶ್ವಾಸ ನಿರ್ಣಯ ಗೊತ್ತುವಳಿ ವಿಶೇಷ ಸಭೆ ಕಾನೂನು ಬಾಹಿರ ಎಂದು ಆಗ್ರಹಿಸಿ ಮನವಿ

ಅವಿಶ್ವಾಸ ನಿರ್ಣಯ ಗೊತ್ತುವಳಿ ವಿಶೇಷ ಸಭೆ ಕಾನೂನು ಬಾಹಿರ ಎಂದು ಆಗ್ರಹಿಸಿ ಮನವಿ

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ವಿಶೇಷ ಸಭೆ ಕಾನೂನು ಬಾಹಿರವಾಗಿದೆ ಎಂದು ಆಗ್ರಹಿಸಿ ಕಾಂಗ್ರೆಸ್‌-ಜೆಡಿಎಸ್‌ನ 10 ಜನ ಸದಸ್ಯರು ಮತ್ತು ಪಕ್ಷೇತರ ಓರ್ವ ಸದಸ್ಯೆ ಚುನಾವಣಾಧಿಕಾರಿ ಹಾಗೂ ಮುಖ್ಯಾಧಿಕಾರಿ ಪ್ರಕಾಶ ಮಾದುಗೋಳಕರ ಅವರಿಗೆ ಮನವಿ ಸಲ್ಲಿಸಿದರು. 

ಸ್ಥಳೀಯ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯನ್ನು 8ಜನ ಸದಸ್ಯರ ಹಾಜರಿಯಲ್ಲಿ ನಡೆಸಿದ್ದೀರಿ. ಆದರೆ, ವಿಜಯಪುರ ಲೋಕಸಭಾ ಸದಸ್ಯರು, ಸಿಂದಗಿ ಶಾಸಕರು, ಪುರಸಭೆ 23ಜನ ಸದಸ್ಯರು ಒಳಗೊಂಡಂತೆ ಪುರಸಭೆಯು ಒಟ್ಟು 25ಜನ ಸದಸ್ಯರ ಸಂಖ್ಯಾಬಲವನ್ನು ಹೊಂದಿದೆ. ಅವರೆಲ್ಲರಿಗೂ ಸಭೆಗೆ ಹಾಜರಾಗಲು ನೋಟೀಸ್ ಕೊಟ್ಟಿರುತ್ತೀರಿ. ಹೀಗಾಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆ ನಡೆಸಲು ಪುರಸಭೆ ನಿಯಮಗಳ ಪ್ರಕಾರ 9ಜನ ಸದಸ್ಯರು ಸಭೆಗೆ ಹಾಜರು ಇರತಕ್ಕದ್ದು, ಆದರೆ, ಕೇವಲ 8ಜನ ಸದಸ್ಯರೊಂದಿಗೆ ಸಭೆ ನಡೆಸುತ್ತಿರುವುದು ಕಾನೂನು ಬಾಹೀರವಾಗಿದೆ. ಈ ನಿಟ್ಟಿನಲ್ಲಿ ಸಭೆಯನ್ನು ಮುಂದೂಡುವಂತೆ ಕಾಂಗ್ರೆಸ್‌-ಜೆಡಿಎಸ್‌ನ 10 ಜನ ಸದಸ್ಯರು ಮತ್ತು ಪಕ್ಷೇತ್ರ ಓರ್ವ ಸದಸ್ಯೆ ತಮ್ಮ ಮನವಿಯಲ್ಲಿ ಮುಖ್ಯಾಧಿಕಾರಿಯನ್ನು ಆಗ್ರಹಿಸಿದ್ದಾರೆ. 

ಕಾಂಗ್ರೆಸ್ ಸದಸ್ಯರಾದ ಬಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಸಂದೀಪ ಚೌರ, ಖೈರುನಬಿ ನಾಟೀಕಾರ, ಭಾಗಮ್ಮ ಡೋಣೂರ, ಗೊಲ್ಲಾಳ ಬಂಕಲಗಿ, ಜೆಡಿಎಸ್ ಸದಸ್ಯರಾದ ರಾಜಣ್ಣ ನಾರಾಯಣಕರ, ಶರಣಗೌಡ ಪಾಟೀಲ, ಬಸವರಾಜ ಯರನಾಳ, ಉಮಾದೇವಿ ಸುಲ್ಪಿ, ಪಕ್ಷೇತರ ಸ 


ಸುದ್ದಿ ಓದಿ