ಇಂಡಿ

ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ನೀಡುವಂತೆ ಆಗ್ರಹಿಸಿ ಮನವಿ

ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ನೀಡುವಂತೆ ಆಗ್ರಹಿಸಿ ಮನವಿ


ಇಂಡಿ18: ಪಟ್ಟಣದ ಬಿಎಸ್‌ಎನ್‌ಎಲ್ ಕಂಪೌಡಿಗೆ ಹತ್ತಿರದಲ್ಲಿ  ಬೀದಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಆಗ್ರಹಿಸಿ ತಾಲೂಕು ಸೌಧ ಎದುರು ಪ್ರತಿಭಟನೆ ನಡೆಸಿ ಸೋಮವಾರ ಉಪವಿಬಾಗಾಧಿಕಾರಿ ರಾಮಚಂದ್ರ ಗಡಾದೆ ಇವರಿಗೆ ಮನವಿ ಸಲ್ಲಿಸಿದರು.  

ಕಳೆದ ಸುಮಾರು  20 ವರ್ಷಗಳಿಂದ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದು ವ್ಯಾಪಾರ ನಂಬಿ ಜೀವನ ಸಾಗಿಸುತ್ತಿದ್ದಾರೆ. ಒಮ್ಮೆಲೆ ವ್ಯಾಪಾರ ಸ್ಥಗಿತ  ಮಾಡಿಸಿದ್ದರಿಂದ ಜೀವನ ನಡೆಸುವದು ದುಸ್ತರವಾಗಿದೆ. ಪೊಲೀಸರು ಬಂದ ಮಾಡಲು ಕಿರುಕುಳ ನೀಡುತ್ತಿದ್ದಾರೆ. ಕೊರೊನಾದಿಂದ ಈಗಾಗಲೇ ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ಈಗ ಬೀದಿಯಲ್ಲಿ ವ್ಯಾಪಾರ ಮಾಡುವದು ಬೇಡವೆಂದರೆ ಜೀವನ ನಡೆಸುವದು ತೊಂದರೆ ಯಾಗುತ್ತದೆ ಎಂಬುದು ಅವರ ವಿನಂತಿಯಾಗಿದೆ. 

ತಾಲೂಕಾ ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ ಬೀದಿ ವ್ಯಾಪಾರಿಗಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು  ಆಗ್ರಹಿಸಿದರು. 

ಬೀದಿ ವ್ಯಾಪಾರಿಗಳಾದ ಹಾಜಿ ಮಲಂಗ ಮುಲ್ಲಾ, ಸುಲ್ತಾನ ಮಕಾಂದಾರ, ಅಲಿಸಾಬ ಬಾಗವಾನ, ರೀಯಾನ್ ಶೇಖ, ಆರೀಫ್ ಮುಲ್ಲಾ, ಕಿರಣ ಸಾಕುಂಕೆ, ರಜಾಕ ಬಾಗವಾನ, ಸದ್ದಾಂ ವಾಲಿಕಾರ, ಭೀಮು ಪೂಜಾರಿ, ಮೌಲಾ ಬಾಗವಾನ ಜೆಡಿ ಎಸ್ ಮುಖಂಡರಾದ ಸಿದ್ದು ಡಂಗಾ, ಅಯೂಬ ನಾಟಿಕಾರ, ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೇವನೂರ, ನಿಯಾಜ್ ಅಗರಖೇಡ, ಇರಪಾನ ಪಠಾಣ, ಸಂಜು ಪಾಯಕರ, ದುಂಡು ಬಿರಾದಾರ, ರವಿ ಶಿಂಧೆ , ಮರೆಪ್ಪ ಗಿರಣಿವಡ್ಡರ ಮತ್ತಿತರಿದ್ದರು. 


ಸುದ್ದಿ ಓದಿ