ಗುಳೇಗುಡ್ಡ

ಹೆಚ್ಚು ಲಸಿಕೆ ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಹೆಚ್ಚು ಲಸಿಕೆ ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
ಗುಳೇದಗುಡ್ಡದಲ್ಲಿ ಉಚಿತ ಲಸಿಕಾ ಅಭಿಯಾನಕ್ಕೆ ಸೋಮವಾರ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್ ಚಾಲನೆ ನೀಡಿದರು.

ಗುಳೇದಗುಡ್ಡ 21: ಬಾದಾಮಿ ಮತಕ್ಷೇತ್ರಕ್ಕೆ ಕೋವಿಡ್ ಲಸಿಕೆಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡಬೇಕೆಂದು ಇಲ್ಲಿನ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್ ಜಿಲ್ಲಾಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ.   

ಅವರು ಸೋಮವಾರ ಪಟ್ಟಣದ ಪುರಸಭೆ ಸಬಾಭವನದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು. 

ಜನೇವರಿ 16 ರಿಂದಲೇ ಕೋವಿಡ್ ಲಸಿಕೆ ಹಾಕಿಕೊಳ್ಳುವ ಕಾರ್ಯಕ್ರಮ ಆರಂಭಗಿದ್ದೂ, ಇಂದಿನ ಉಚಿತ ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗೆ 3750 ಕೋವಿಡ್ ಲಸಿಕೆಗಳನ್ನು ಪೂರೈಸಲು ವಿನಂತಿಸಿಕೊಳ್ಳಲಾಗಿತ್ತು. ಆದರೆ ಅವರು 3000 ಲಸಿಕೆ ಕಳಿಸಿದ್ದಾರೆ. ಅದರಲ್ಲಿ ಗುಳೇದಗುಡ್ಡ ತಾಲೂಕಿಗೆ 1200 ಲಸಿಕೆಗಳನ್ನು ಪೂರೈಸಿದ್ದೂ, ಇಂದು ಬಂದಿರುವ ಎಲ್ಲ ಲಸಿಕೆಗಳನ್ನು ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರಿಂದ ಜಿಲ್ಲಾಧಿಕಾರಿಗಳಿಗೆ ಮಾತನಾಡಿಸಿ ಇನ್ನೂ ಹೆಚ್ಚಿನ ಲಸಿಕೆ ಪೂರೈಸುವಂತೆ ಕೇಳಿಕೊಳ್ಳಲಾಗುತ್ತದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಎರಡು ಹಂತದ ಕೋವಿಡ್ ಲಸಿಕೆ ಹಾಕಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದರು.  

ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ ಮಾತನಾಡಿ, ಲಸಿಕೆ ಹಾಕಿಸಿಕೊಂಡು ಕೊರೋನಾ ಮುಕ್ತ ಪಟ್ಟಣ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಪಟ್ಟಣದ ಒಂದುಕಡೆ ಮಾತ್ರ ಲಸಿಕಾ ಕೇಂದ್ರವಿದ್ದಾಗ ಸಾರ್ವಜನಿಕರಿಗೆ ಅನಾನುಕೂಲವಿತ್ತು. ಆದರೆ ಇಂದು ಅಭಿಯಾನ ನಿಮಿತ್ಯ ನಾಲ್ಕು ಕಡೆಗಳಲ್ಲಿ ಲಸಿಕಾ ಕೇಂದ್ರ ಆರಂಭಿಸಲಾಗಿದ್ದೂ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ ಎಂದರು. 

ತಾಲೂಕಾ ವೈದ್ಯಾಧಿಕಾರಿ ಎಂ.ಬಿ.ಪಾಟೀಲ ಮಾತನಾಡಿ, ಬಾದಾಮಿ ತಾಲೂಕಿಗೆ ಬಂದಿರುವ ಒಟ್ಟು 3000 ವ್ಯಾಕ್ಷಿನ್‌ಗಳಲ್ಲಿ 1200 ವ್ಯಾಕ್ಷಿನ್‌ಗಳನ್ನು ಗುಳೇದಗುಡ್ಡಕ್ಕೆ ಪೂರೈಸಿದ್ದೇವೆ. ಗುಳೇದಗುಡ್ಡ ಪಟ್ಟಣದ ನಾಲ್ಕು ಸ್ಥಳಗಳಲ್ಲಿ  ಹಾಗೂ ತಾಲೂಕಿನ 16 ಗ್ರಾಮೀಣ ಸ್ಥಳಗಳಲ್ಲಿ ಇಂದು ವ್ಯಾಕ್ಷಿನ್ ಹಾಕುವ ಅಭಿಯಾನಕ್ಕೆ ಆರಂಭ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವ್ಯಾಕ್ಷಿನ್ ಹಾಕಿಕೊಂಡು ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕೆಂದರು.  

ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ತಹಸೀಲ್ದಾರ್ ಜಿ.ಎಂ.ಕುಲಕರ್ಣಿ, ವೈದ್ಯಾಧಿಕಾರಿ ಡಾ. ನಾಗರಾಜ ಕುರಿ, ವೈದ್ಯ ಡಾ.ಕೆ.ಟಿ. ಗಾಜಿ, ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ವಿಠ್ಠಲ ಕಾವಡೆ, ಮಾಜಿ ಪುರಸಭೆ ಉಪಾಧ್ಯಕ್ಷ ಪ್ರಕಾಶ ಮುರಗೋಡ, ಸಂಜಯ ಬರಗುಂಡಿ, ರಾಜಶೇಖರ ಸಾಳಗುಂದಿ, ಮಹಾಲಿಂಗಪೂರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ