ಅಕ್ರಮ ಆಸ್ತಿ ಸಕ್ರಮಗೊಳಿಸಲು ಮನವಿ
ಬ್ಯಾಡಗಿ 15: ತಮ್ಮ ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಎಲ್ಲ ಸರ್ಕಾರಿ ಜಮೀನು, ನಿವೇಶನದ ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸಲು ತಾವು ಹೆಚ್ಚಿನ ಆದ್ಯತೆಯನ್ನು ನೀಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಅಕ್ರಮ-ಸಕ್ರಮ ಸಮಿತಿಯ ವತಿಯಿಂದ ನಮೂನೆ 50.53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ್ದ ಬಿಸಲಹಳ್ಳಿ ಗ್ರಾಮದ 21ಜನ ಅರ್ಹ ಫಲಾನುಭವಿಗಳಿಗೆ ರಿಸನಂ 26/2ರಲ್ಲಿ ಜಮೀನು ಮಂಜೂರಾದ ಹಕ್ಕು ಪತ್ರವನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿರುವ ಫಲಾನುಭವಿಗಳ ಕುರಿತು ಪರೀಶೀಲನೆ ನಡೆಸಿದ್ದು, ಅಲ್ಲಿನ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಅರ್ಹ ಬಡಜನರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಆಸ್ತಿಗಳನ್ನು ಸಕ್ರಮಗೊಳಿಸಲು ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತ್ವರಿತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಸಿದ್ಧಲಿಂಗಯ್ಯ ಪಾಟೀಲ, ಗ್ರೇಡ್ 2 ತಹಶೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣನವರ, ಬಿಸಲಹಳ್ಳಿ ಗ್ರಾಪಂ ಉಪಾಧ್ಯಕ್ಷ ದ್ಯಾಮನಗೌಡ ಪೂಜಾರ, ಸದಸ್ಯ ಹೇಮಂತ ಶೆಟ್ಟರ, ಶೇಖರಗೌಡ್ರ ಗೌಡರ, ಹನುಮಂತಪ್ಪ ಮಾಳಗಿ, ಬಸವರಾಜ ಕಾಕೋಳ, ಅರ್ಜುನಪ್ಪ ಲಮಾಣಿ, ಶಿವಯೋಗಿ ಉಕ್ಕುಂದ, ಕಂದಾಯ ನೀರೀಕ್ಷಕ ಆರಿ್ಸ.ದ್ಯಾಮನಗೌಡ್ರ, ಅದ್ವೀತ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.