ಕಾಗವಾಡ

ಜಲಶುದ್ಧೀಕರಣಗೊಳಿಸಿ ಪ್ರತಿದಿನ ನೀರು ಪೂರೈಸಲು ಮನವಿ

ಜಲಶುದ್ಧೀಕರಣಗೊಳಿಸಿ ಪ್ರತಿದಿನ ನೀರು ಪೂರೈಸಲು ಮನವಿ

ಕಾಗವಾಡ 02:  ಕೃಷ್ಣಾ ನದಿ ತೀರದಲ್ಲಿರುವ ಕಾಗವಾಡ ತಾಲೂಕಿನ 25 ಸಾವಿರ ಜನಸಂಖ್ಯೆ ಹೊಂದಿರುವ ಅತಿದೊಡ್ಡ ಗ್ರಾಮವಾದ ಮತ್ತು ಪುರಸಭೆಯಾಗಿರುವ ಉಗಾರ ಖುರ್ದ ಪಟ್ಟಣದಲ್ಲಿ 3 ದಿನಗಳಲ್ಲಿ 1 ಬಾರಿ, ಅದು ಕೂಡ ಅಶುದ್ಧ ನೀರು ಪೂರೈಸುತ್ತಿದ್ದಾರೆ. ಇದ್ದರಿಂದ ಜನರ ಆರೋಗ್ಯಕ್ಕೆ ಅಪಾಯವಾಗುವ ಸಾಧ್ಯತೆಯಿದ್ದು, ಕೂಡಲೆ ಜಲಶುದ್ಧಿಕರಣಗೊಳಿಸಿ ಪ್ರತಿದಿನ ನೀರು ಪೂರೈಸಬೇಕೆಂದು ಪುರಸಭೆ ಸದಸ್ಯ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಬಾಳಕೃಷ್ಣ ಪಾಟೀಲ ಪುರಸಭೆ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಸೋಮವಾರ ರಂದು ಪುರಸಭೆಯ ಅಧಿಕಾರಿಗಳಿಗೆ ವ್ಯವಸ್ಥಾಪಕ ಘಟಕಾಂಬಳೆ, ಕಲ್ಲಪ್ಪಾ ಗಾವಡೆ ಇವರಿಗೆ ಬಾಳಕೃಷ್ಣ ಪಾಟೀಲ ಹಾಗೂ ಇತರ ಸದಸ್ಯರು ಮನವಿ ಅರ್ಪಿಸಿದರು.

ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿಗಳಾದ ಕಮಲವ್ವಾ ಭಾಗೋಜಿ ಇವರಿಗೆ ಪ್ರತಿಯೊಂದು ಸಭೆಯಲ್ಲಿ ತಿಳಿಸಿದ್ದರೂ ಯಾವುದೇ ಕ್ರಮ ಈ ವರೆಗೆ ಕೈಗೊಂಡಿಲ್ಲಾ. ನದಿ ತೀರದಲ್ಲಿರುವ ಉಗಾರ ಖುರ್ದ ಪಟ್ಟಣದ ಜನರಿಗೆ ಕಲುಶಿತ ನೀರು ಪೂರೈಸುತ್ತಿದ್ದಾರೆ. ಅದು 2-3 ದಿನಗಳಲ್ಲಿ ಒಮ್ಮೆ! ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗುವುದು.

ಬರುವ ಒಂದು ವಾರದಲ್ಲಿ ಸಮಪರ್ಕವಾಗಿ ನೀರು ಪೂರೈಕೆವಾಗದೆಯಿದ್ದರೆ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ಮನವಿ ನೀಡಿದ್ದಾರೆ.

ಈ ವೇಳೆ ನೀರು ಸಮಸ್ಯೆ ಎದುರಿಸುತ್ತಿರುವ ನಾಗಕರು ಹಾಗೂ ಸದಸ್ಯರಾದ ಸಂತೋಷ ಲೋಕುರೆ, ರೋಹನ ನಾಯಿಕ, ಈಫಾಜ್ ಸನದಿ, ಸುವರ್ಣಾ ವಾಘಮೋಡೆ, ವೈಭವ ಕಾಗೆ, ವಿನಾಯಕ ಕಾಂಬಳೆ, ಮಹಾದೇವ ಬಾಗೆವಾಡಿ, ಮಹಾದೇವ ವಡಗಾಂವೆ, ಅಭಿಷೇಕ ಪಾಟೀಲ, ವಿನೋದ ಪಾಠನಕರ, ಸೇರಿದಂತೆ ಅನೇಕರು ಇದ್ದರು.

ಫೋಟೊ ಶೀರ್ಷಿಕೆ: 01 ಕಾಗವಾಡ 4 ಉಗಾರ ಪುರಸಭೆ ಅಧಿಕಾರಿಗಳಿಗೆ ಮನವಿ ಅರ್ಪಿಸುತ್ತಿರುವ ಬಾಳಕೃಷ್ಣ ಪಾಟೀಲ, ಮತ್ತಿತರರು.

ಸುದ್ದಿ ಓದಿ