ಗ್ರಾಮಕ್ಕೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಮನವಿ
ಸಿಂದಗಿ; ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಟ್ಟಪದ ಹತ್ತಿರ ಇರುವ ಹುಡೇದ ಲಕ್ಷ್ಮೀ ದೇವಾಲಯದಲ್ಲಿ ಅವರು ಹಮ್ಮಿಕೊಂಡಿರುವ ವಿಶ್ವ ಶಾಂತಿಗಾಗಿ ಲೋಕ ಕಲ್ಯಾಣಗೋಸ್ಕರ ಇಷ್ಟಲಿಂಗ ಪೂಜಾ ಹಾಗೂ ಮಹಾ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಚಟ್ನಳ್ಳಿ ಎಚ್ಪಿಎಸ್ ಶಾಲೆಯಲ್ಲಿ 6 ರಿಂದ 8ನೇ ತರಗತಿಗೆ 15000 ಸಾವಿರ ಹೊಸ ಶಿಕ್ಷಕರ ನೇಮಕಾತಿಯಲ್ಲಿ ಎಚ್ಪಿಎಸ್ ಚಟ್ನಳ್ಳಿ ಗ್ರಾಮಕ್ಕೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಸರ್ವ ಮುಖಂಡರು ಬಿಇಓ ಕಾರ್ಯಾಲಯದ ಸಿಬ್ಬಂದಿಗಳೀಗೆ ಮನವಿ ಸಲ್ಲಿಸಿದರು.
ಮುಖಂಡರು ಮಾತನಾಡಿ, ಚಟ್ನಳ್ಳಿ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ ಶಾಲೆ ಇದ್ದರೂ ಸುಮಾರು 130 ಮಕ್ಕಳು ಓದುತ್ತಿದ್ದು ಒಬ್ಬರು ಮುಖ್ಯ ಗುರುಗಳು ಒಬ್ಬರು ಸಹ ಶಿಕ್ಷಕರು ಮಾತ್ರ ಇದ್ದು ಮಕ್ಕಳ ಪಾಠ ಭೋದನೆಗೆ ತುಂಬಾ ತೊಂದರೆಯಾಗಿದ್ದು ಗ್ರಾಮೀಣ ಪ್ರತಿಭೆಗಳು ಕಮರಿ ಹೋಗುತ್ತಿದೆ. ತಾವುಗಳು ದೊಡ್ಡ ಮನಸ್ಸು ಉದಾರಿಯಾಗಿ 15000 ಸಾವಿರ ನೇಮಕಾತಿಯಲ್ಲಿ ಚಟ್ನಳ್ಳಿ ಶಾಲೆಗೆ 1 ಇಂಗ್ಲೀಷ, 1 ಗಣಿತ/ವಿಜ್ಞಾನ ಶಿಕ್ಷಕರ ಹುದ್ದೆಯನ್ನು ಮಂಜೂರು ಮಾಡಿ ಸದರಿ
ನೇಮಕಾತಿಯಲ್ಲಿ ನಮ್ಮ ಶಾಲೆಗೆ ಕಳುಹಿಸಬೇಕೆಂದು ತಮ್ಮಲ್ಲಿ ನಮ್ಮ ಸಂಘಟನೆಯ
ಬೇಡಿಕೆಯಗಿರುತ್ತದೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂಬರುವ ದಿನದಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯಾಡಳಿತ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಸಮಸ್ತ ಗ್ರಾಮಸ್ಥರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಸರ್ವ ಮುಖಂಡರು ಎಚ್ಚರಿಕೆ ನೀಡಿದರು.