ಸಾರ್ವಜನಿಕರ ಮನೆಗಳನ್ನು ಸ್ಲಂನಲ್ಲಿ ಮಂಜೂರು ಮಾಡಿಕೊಡಬೇಕೆಂದು ಮನವಿ
ಶಿಗ್ಗಾವಿ 27: ಪಟ್ಟಣದ ಮಹೆಬೂಬ ನಗರದಲ್ಲಿ ವಾಸವಾಗಿರುವ ಸಾರ್ವಜನಿಕರ ಮನೆಗಳನ್ನು ಸ್ಲಂನಲ್ಲಿ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿ ಪುರಸಭೆಯ ಮುಖ್ಯಾಧಿಕಾರಿ ವಾಯ್ ಕೆ ಜಗದೀಶ ಅವರಿಗೆ ಅಲ್ಲಿಯ ಸ್ಥಳೀಯರು ಮನವಿ ಮೂಲಕ ಒತ್ತಾಯಿಸಿದರು.
13-15 ನೇ ವಾರ್ಡಿನ ಸದಸ್ಯರಾದ ಜಾಫರ್ಖಾನ್ ಪಠಾಣ್ ಮತ್ತು ವಸಂತಾ ಬಾಗೂರ ಅವರುಗಳ ಸಮ್ಮುಖದಲ್ಲಿ ಮನವಿ ಅರ್ಿಸಿದ ಸ್ಥಳೀಯರು, ಪಟ್ಟಣದ ಹಳೇ ವಾರ್ಡ ನಂ 05, ಹೊಸ ವಾರ್ಡ ನಂ 13, ಮತ್ತು 15ರ ಮೆಹಬೂಬ ನಗರದ ಸರಕಾರಿ ಆಸ್ತಿಯಲ್ಲಿ ಇರುವ ಎಲ್ಲಾ ಮನೆಗಳನ್ನು ಸ್ಲಂನಲ್ಲಿ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದ ಅಲ್ಲಿಯ ನಿವಾಸಿಗಳು, ಮೆಹಬೂಬ ನಗರದ ಆಸ್ತಿ ಸಂಖ್ಯೆ 217/ಬಿ ಸರಕಾರಿ ಜಾಗೆಯಲ್ಲಿ ಸರ್ಕಾರಿ ಆಸ್ಪತ್ರೆಯ ಹಿಂಬಾಗದಲ್ಲಿ ಸುಮಾರು 50 ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸವಾಗಿದ್ದು ನಮಗೆ ಇಲ್ಲಿಯವರೆಗೂ ಒಂದು ಸ್ವಂತ ಖಾಯಂ ಸೂರು ದೊರಕಿಲ್ಲ. ಮನೆಗಳನ್ನು ನಿರ್ಮಾಣ ಮಾಡಿಕೊಡುವ ಬಗ್ಗೆ ಪ್ರತಿವರ್ಷವು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರೂ ಇಲ್ಲಿಯವರೆಗೂ ಯಾರೂ ನಮ್ಮ ಅಳಲನ್ನು ಆಲಿಸಿಲ್ಲ, ಅದರ ಬಗ್ಗೆ ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ, ಈ ಕುರಿತು ಪುರಸಭೆ ಕಾರ್ಯಾಲಯಕ್ಕೂ ಹಲವಾರು ಬಾರಿ ಅರ್ಜಿಯನ್ನು ಸಲ್ಲಿಸಿದ್ದೇವೆ, ಸರಕಾರಿ ಆಸ್ಪತ್ರೆಯ ಹಿಂಬಾಗದಲ್ಲಿ ಸುಮಾರು 78 ಕುಟುಂಬಗಳು ವಾಸವಾಗಿದ್ದು ಮನೆಗಳನ್ನು ಸ್ಲಮ್ನಲ್ಲಿ ಮಂಜೂರು ಮಾಡಿಕೊಡಬೇಕು. ಮನೆಗಳ ಭೂ ಬಾಡಿಗೆ, ಮತು ್ತಸರಕಾರಿ ಚಂದಾಗಳನ್ನು ಕಟ್ಟುತ್ತಾ ಬಂದಿದ್ದೇವೆ, ಆದ್ದರಿಂದ ನಮಗೆ ಎರಡು ಬದಿಯ ಮನೆಗಳನ್ನು ಸ್ಲಂನಲ್ಲಿ ಮಂಜೂರು ಮಾಡಿಕೊಡಬೇಕು 5 ದಿನಗಳ ಒಳಗಾಗಿ ಮಾಹಿತಿ ತಿಳಿಸಬೇಕು ಇಲ್ಲವಾದಲ್ಲಿ ತಮ್ಮ ಪುರಸಭೆ ಕಾರ್ಯಾಲಯದ ಮುಂದೆ ಧರಣಿಗೆ ಕುಳಿತುಕೊಳ್ಳುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ರವಿ ಭಜಂತ್ರಿ, ಅಬ್ದುಲ್ ಖಾದರ್ ಜಿಲಾನಿ, ಮಂಜು ಮಧುರ್ಕರ್, ಪ್ರಶಾಂತ ಸಕ್ರಿಕಡ್ಡಿ, ವಸಂತ ಹಂಸನೂರ, ಸಾಧಿಕ್ ಕಾರಡಗಿ, ಹನುಮಂತ ಭಜಂತ್ರಿ, ನಭಿಸಾಬ್ ಕೌತಾಳ್, ರಿಯಾಜ್ಅಹ್ಮದ್ ಕಣವಿ, ಹಮ್ಮೀದ್ ಕಾರಡಗಿ, ಜೀಲಾನಿ ಬಸರೀಕಟ್ಟಿ, ಮೌಲಾಲಿ ಹುಬ್ಬಳ್ಳಿ, ಅಲ್ಲಾದ್ದೀನ್ ಮಲ್ಲೂರ, ಸೌಕತ್ ಅಲಿ ದುಂಡಶಿ, ಇಮ್ರಾನ್ಖಾನ್ ಸವಣೂರ ಸೇರಿದಂತೆ ಸ್ಥಳೀಯರು ಇದ್ದರು.