ಇಂಡಿ

ಮದ್ಯದ ಅಂಗಡಿ ತೆರೆಯದಂತೆ ಒತ್ತಾಯಿಸಿ ಮನವಿ

ಮದ್ಯದ ಅಂಗಡಿ ತೆರೆಯದಂತೆ ಒತ್ತಾಯಿಸಿ ಮನವಿ


ಇಂಡಿ16:  ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಮದ್ಯದ ಅಂಗಡಿ (ಎಮ್‌ಎಸ್‌ಆಯ್‌ಎಲ್) ತೆರೆಯದಂತೆ ಒತ್ತಾಯಿಸಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯ ಅಧ್ಯಕ್ಷರ ಒಳಗೊಂಡು ತಹಶೀಲ್ದಾರ, ಅಬಕಾರಿ ನೀರೀಕ್ಷಕರಿಗೂ, ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್‌.ಐ. ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು. 

ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಲಯ್ಯ ಸೋ. ಹಿರೇಪಟ್ಟ ಮಾತನಾಡಿ,  ಸಾಲೋಟಗಿ ಗ್ರಾಮದಲ್ಲಿ ಈಗಾಗಲೇ ಶಾರದಾ ಕಿರಿಯ ಪ್ರಾಥಮಿಕ ಶಾಲೆ ಮತ್ತು ಶಿವಯೋಗೇಶ್ವರ ಸರ್ವೂದಯ ಸಂಸ್ಥೆಯ ಪ್ರೌಢ ಮತ್ತು ಪದವಿ ಪೂರ್ವ ಶಾಲಾ ಕಾಲೇಜು ಇದಿದ್ದು. ವಿದ್ಯಾರ್ಥಿ/ನಿಯರು ವಿದ್ಯಾಭ್ಯಾಸ ಮಾಡುವಂತ ಸ್ಥಳವಾಗಿರುವದರಿಂದ ಮದ್ಯದದಂಗಡಿ ತೆರೆಯುವುದು ಕಾನೂನು ಬಾಹಿರ ಮದ್ಯದ ಮಳಿಗೆ ತೆರೆಯಲು ಅವಕಾಶವನ್ನು ಸರ್ಕಾರ ಮತ್ತು ಅಧಿಕಾರಿಗಳು ನೀಡಬಾರದು ಎಂದರು. 

ಈ ಸಂದರ್ಭದಲ್ಲಿ ಸಿದ್ದರಾಯ ಅರಳಗುಂಡಗಿ, ಮಾಜಿ ಗ್ರಾ ಪಂ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಸೋಮನಾಥ ಮಂದೇವಾಲಿ, ಮಹೇಶ ಹಸನಾಪುರ, ಶಿವಾನಂದ ನಂದಗೊಳ, ಮಲ್ಲು ಬಗಲಿ, ಸೃಜನ ಜಾಧವ, ದಾನಯ್ಯ ಪಠಪತಿ, ಅಪ್ಪಶಾ ಕೊರಳ್ಳಿ, ಈರಣ್ಣ ಗಾಳಿಮಠ, ರಾಜು ಗಜಾಕೋಶ, ಭೀಮು ಚವ್ಹಾಣ, ಗಂಗಾಧರ ಆಳೂರ, ರಾಘವೇಂದ್ರ ಚನಗೊಂಡ, ಗುಲಾಬ ಚವ್ಹಾಣ, ರಾಮ ಹಳ್ಳಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದರು. 


ಸುದ್ದಿ ಓದಿ