ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಮನವಿ
ಇಂಡಿ05: ತಾಲೂಕಿನ ಕೃಷ್ಣಾ ಕಾಲುವೆಯ ಕೆಳಗಡೆಯ ಹಾಗೂ ನೀರಾವರಿ ಇರುವ ಗ್ರಾಮೀಣ ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲು ಹಗಲು ಸತತ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಬಿ.ಡಿ.ಪಾಟೀಲರ ನೇತೃತ್ವದಲ್ಲಿ ಶನಿವಾರ ಇಂಡಿಯ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ವಾಯ್.ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಬಿ.ಡಿ.ಪಾಟೀಲ ಮಾತನಾಡಿ ಇಂಡಿ ತಾಲೂಕಿನ ಕೃಷ್ಣಾ ಕಾಲುವೆ ಕೆಳಗಡೆ ಹಾಗೂ ನೀರಾವರಿ ಹೊಂದಿರುವ ರೈತರಿಗೆ ಹಗಲು ಮೂರು ಗಂಟೆ ರಾತ್ರಿ ನಾಲ್ಕು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದು ಇದರಿಂದಾಗಿ ರೈತರಿಗೆ ಅತೀವ ತೊಂದರೆ ಯಾಗುತ್ತಿದೆ. ಒಂದು ಕಡೆ ವಿದ್ಯುತ್ ಕಣ್ಣು ಮುಚ್ಚಾಲೆ, ಇನ್ನೊಂದು ಕಡೆ ಅತೀಯಾದ ಚಳಿಯಿಂದ ರೈತರಿಗೆ ತುಂಬ ಅನಾನೂಕುಲ ವಾಗುತ್ತಿದೆ.ಕೂಡಲೇ ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ರೈತರ ಜೊತೆಗೆ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಅಯೂಬ ನಾಟಿಕಾರ, ಸಿದ್ದು ಡಂಗಾ, ಮಹಿಬೂಬ ಬೇವನೂರ, ಪೀರ್ಪ ಹೊಟಕರ, ಡಾ. ರಮೇಶ ರಾಠೋಡ, ಸಂತೋಷ ರಾಠೋಡ, ಬಾಳು ರಾಠೋಡ, ಬಸವರಾಜ ಹಂಜಗಿ, ಮಜಿದ ಸೌದಾಗರ, ನಿಯಾಜ್ ಅಗರಖೇಡ, ಇರ್ಫಾನ ಅಗರಖೇಡ, ರಾಜು ಮುಲ್ಲಾ, ರವಿ ಶಿಂಧೆ, ರಮೇಶ ರಾಠೋಡ, ಸಿದ್ದರಾಮ ಹಂಜಗಿ, ಆರೀಫ್ ಜಮಾದಾರ, ಮಹಾದೇವ ಪೂಜಾರಿ, ಅಸ್ಪಾಕ ಶೇಖ, ಪರಮೇಶ್ವರ ಕಂಬಾರ, ಬಾಬು ಮೇತ್ರಿ, ಅನ್ವರ ದುದನಿ, ರಮೇಶ ಪೂಜಾರಿ ಮತ್ತಿತರಿದ್ದರು.