ರಾಣೆಬೆನ್ನೂರ

ಅರುಣಕುಮಾರ ಗುತ್ತೂರ ಮೇಲೆ ಕಾನೂನು ಕ್ರಮ ಜರುಗಿಸಲು ಮನವಿ

ಅರುಣಕುಮಾರ ಗುತ್ತೂರ ಮೇಲೆ ಕಾನೂನು ಕ್ರಮ ಜರುಗಿಸಲು ಮನವಿ

ರಾಣಿಬೆನ್ನೂರ 21:  ತನ್ನ ಅಧಿಕಾರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಸಾಕಷ್ಟು ಹಣ, ಆಸ್ತಿ ಸಂಪಾಧಿಸಿ ಕಳೆದ ಚುನಾವಣೆಯಲ್ಲಿ 40 ಕೋಟಿ ಹಣ ಖರ್ಚು ಮಾಡಿರುವೆನೆಂದು ಬಹಿರಂಗವಾವಾಗಿ ಹೇಳಿಕೆ ನೀಡಿರುವ ಮಾಜಿ ಶಾಸಕ ಹಾಗೂ ಬಿಜೆಪಿ ಹಾವೇರಿ ಜಿಲ್ಲಾಧ್ಯಕ್ಷ ಅರುಣಕುಮಾರ ಗುತ್ತೂರ (ಪೂಜಾರ) ಅವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ, ಮಂಗಳವಾರ ರೈತ ಸಂಘದ ಕಾರ‌್ಯಕರ್ತರು ಮತ್ತು ಸ್ವಾಭಿಮಾನಿ ಮತದಾರರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ರವಿಂದ್ರಗೌಡ ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಸಾಕಷ್ಟು ಹಣ, ಆಸ್ತಿ ಸಂಪಾಧಿಸಿ ಕಳೆದ ಚುನಾವಣೆಯಲ್ಲಿ 40 ಕೋಟಿ ಹಣ ಖರ್ಚು ಮಾಡಿರುವೆನೆಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಮಾಜಿ ಶಾಸಕ ಹಾಗೂ ಬಿಜೆಪಿ ಹಾವೇರಿ ಜಿಲ್ಲಾಧ್ಯಕ್ಷ ಅರುಣಕುಮಾರ ಗುತ್ತೂರ (ಪೂಜಾರ) ಅವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.  

ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ನಾಮ ಪತ್ರ ಸಲ್ಲಿಸುವಾಗ ಚುನಾವಣ ಆಯೋಗಕ್ಕೆ 40 ಕೋಟಿ ಹಣ ತೋರಿಸದೆ ನನ್ನಲ್ಲಿ ಸ್ವಲ್ಪ ಹಣವಿದ್ದು ಸಾಲದ ಮೂಲವನ್ನೇ ಚುನಾವಣ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದು, ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಖರ್ಚು ಮಾಡಲು 40 ಕೋಟಿ ಹಣ ಎಲ್ಲಿಂದ ಬಂತು? ಆದಕಾರಣ ಅವರ ಎಲ್ಲಾ ಆಸ್ತಿಗಳನ್ನು ಮಟ್ಟುಗೋಲು ಹಾಕಿಕೊಂಡು ಇಲಾಖೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರವಿಂದ್ರಗೌಡ ಪಾಟೀಲ ಆಗ್ರಹಿಸಿದರು. 

ಸುರೇಶ ಜಾಡಮಾಲಿ, ಹರಿಹರಗೌಡ ಪಾಟೀಲ, ರಾಜು ಮಾದಮ್ಮನವರ, ತಿಪ್ಪೇಶ ನಾಯಕ, ಇಕ್ಬಾಲ್‌ಸಾಬ್ ರಾಣೆಬೆನ್ನೂರ, ಸಂಜೀವರಡ್ಡಿ ಮುದಗಣಗಿ, ವಿರುಪಾಕ್ಷಗೌಡ ಪಾಟೀಲ, ಮಂಜುನಾಥ ಹಲವಾಗಲ, ಹಾಲೇಶ ಕೆಂಚನಾಯಕರ, ನಿಂಗಪ್ಪ ಅಂತರವಳ್ಳಿ, ನಾಗನಗೌಡ ಸಂಕನಗೌಡ್ರ, ತಿರುಕಪ್ಪ ವಡ್ಲವರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು. 


ಸುದ್ದಿ ಓದಿ