ಸಿಂಧಗಿ

ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಛತೆಗೆ ಒತ್ತಾಯಿಸಿ ಮನವಿ

ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಛತೆಗೆ ಒತ್ತಾಯಿಸಿ ಮನವಿ


ಸಿಂದಗಿ 08: ಕುಡಿಯುವ ನೀರು ಪೂರೈಕೆ ಮತ್ತು ಚರಂಡಿ ಸ್ವಚ್ಛತೆಗಾಗಿ ಆಗ್ರಹಿಸಿ ಇಲ್ಲಿನ 23ನೇ ವಾರ್ಡ್‌ ನಿವಾಸಿಗಳು ಸಮಾಜ ಪರಿವರ್ತನ ಸೇನಾ ಸಮಿತಿ ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಂತೇಶ ನಾಯ್ಕೋಡಿ, ಅಶೋಕ ನೆಗಿನಾಳ, ಸಲೀಂ ಬಡಿಗೇರ ಮಾತನಾಡಿ, 23ನೇ ವಾರ್ಡಿನಲ್ಲಿ ಸಾವಿರಾರು ಬಡ ಕೂಲಿಕಾರರು ವಾಸ ಮಾಡುತ್ತಿದ್ದು, ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ 2-3 ತಿಂಗಳಿಂದ ಬೆರಳೆಣಿಕೆಯಲ್ಲಿರುವ ಕೊಳವೆಬಾವಿಗಳು ಕೆಟ್ಟು ನೀರು ಪೂರೈಕೆ ಸ್ಥಗಿತಗೊಂಡಿದೆ. ಈ ವಾರ್ಡು ಮತ್ತು 22ನೇ ವಾರ್ಡುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. 

ಈ ವಾರ್ಡಿನಲ್ಲಿರುವ ಬಂದಾಳ ಮುಖ್ಯರಸ್ತೆಯಲ್ಲಿಯೇ ಚರಂಡಿ, ಸಿ.ಸಿ ರಸ್ತೆ ಅಗೆದು ತಿಂಗಳೇ ಗತಿಸಿದರೂ ಇನ್ನೂ ಹಾಗೆಯೇ ಇದೆ. ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಶ್ರೀಕಾಂತ ಶಿವಪೂರ, ಸಿದ್ದು ಪೂಜಾರಿ, ಅನಿಲ ಜೇರಟಗಿ, ಶಿವಕುಮಾರ ಕನ್ನೊಳ್ಳಿ, ಮೈಬೂಬ ಮುಲ್ಲಾ, ಕುಮಾರ ಮಲಘಾಣ, ವಿನೋದ ಬಡಿಗೇರ, ಶಿವಪುತ್ರ ತಳವಾರ, ರಾಜೂ ಕರಗಜದಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ