ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ವಿರುದ್ಧ ಕ್ರಮಕ್ಕೆ ಮನವಿ
ಲೋಕದರ್ಶನ ವರದಿ
ಯರಗಟ್ಟಿ 30: ರಾಜ್ಯದ ಮುದ್ದೇಬಿಹಾಳ ಶಾಸಕ ವರದಿಗೆ ಸಂಬಂಧಪಟ್ಟಂತೆ ಪತ್ರಕರ್ತರಿಗೆ ಜೀವ ಬೆದರಿಗೆಯೊಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಶಾಸಕ ರಾಜೀನಾಮೆಗೆ ಆಗ್ರಹಿಸಿದೆ.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಹುಲ್ಲೂರ ತಹಶೀಲ್ದಾರ್ಗೆ ಮನವಿ ಅರ್ಿಸಿ ಮಾತನಾಡಿ, ಅ.17ರಂದು ಮುದ್ದೇಬಿಹಾಳದ ಶಾಸಕ ಎ. ಎಸ್. ಪಾಟೇಲ್ ನಡಹಳ್ಳಿ ಸುಮಾರು 19 ಕೋಟಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ನಿಯಮಗಳನ್ನು ಗಾಳಿಗೆ ತೂರಿ
ಕಾರ್ಯನಿರ್ವಹಿಸಿದ್ದಾರೆಂದು ಸಾರ್ವಜನಿಕರ ಆಕ್ಷೇಪಣೆ ಮೇರೆಗೆ ವರದಿ ಮಾಡಿದ್ದರು.
ಈ ಬಗ್ಗೆ ಶಾಸಕರು ಪತ್ರಕರ್ತರಿಗೆ ಜೀವ ಬೆದರಿಕೆಯೊಡ್ಡಿ ಪತ್ರಿಕಾ ಧರ್ಮದ ವಿರುದ್ಧ ನಡೆದುಕೊಂಡಿದ್ದಾರೆ.
ಸಮಾಜದಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಪತ್ರಕರ್ತರು ಧ್ವನಿ ಎತ್ತಿದ್ದು ಇದನ್ನು ಸಹಿಸದ ಶಾಸಕ ನಡಹಳ್ಳಿ ತಮ್ಮ ಬೆಂಬಲಿಗರ ಮೂಲಕ ಪತ್ರಕರ್ತರ ಹಲ್ಲೆಗೆ ಮುಂದಾಗಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಗ್ರೇಡ್-2 ಎಸ್ ಜಿ ದೊಡ್ಡಮನಿ ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ.
ತಾಲ್ಲೂಕಾಧ್ಯಕ್ಷ ಪೀರೋಜ ಖಾದ್ರಿ, ಹಿರಿಯ ಪತ್ರರ್ಕತರಾದ ಕೆ. ಎಫ್. ನದಾಪ, ಶಶಿಧರ ಪಾಟೀಲ, ಸಚೀನ ಬಡಿಗೇರ, ಹೇಮಂತ ಗೋಪಾಳಿ, ಬಸವರಾಜ ದಳವಾಯಿ ಮುಂತಾದವರು ಉಪಸ್ಥಿತರಿದ್ದರು.