ಅಂಗನವಾಡಿ ಕಾರ್ಯಕರ್ತೆ ವರ್ಗಾವಣೆಗೆ ಆಗ್ರಹಿಸಿ ಮನವಿ
ಇಂಡಿ: ತಾಲೂಕಿನ ಚೋರಗಿ ಗ್ರಾಮದಲ್ಲಿನ ಅಂಗನವಾಡಿ 01 ರ ಕಾರ್ಯಕರ್ತೆ ಸರಿಯಾಗಿ ಫಲಾನುಭವಿಗಳಿಗೆ ಆಹಾರ ಪದಾರ್ಥ ವಿತರಣೆ ಮಾಡುತ್ತಿಲ್ಲ. ಅವರನ್ನು ಕೂಡಲೆ ವಜಾ ಮಾಡಬೇಕು ಇಲ್ಲದಿದ್ದರೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸಿಡಿಪಿಓ ಸಂಗೀತಾ ಹಿರೇಮನಿ ಅವರಿಗೆ ಮನವಿ ಸಲ್ಲಿಸಿದರು.
ಅಲ್ಲದೆ ಸರಿಯಾಗಿ ಆಹಾರ ವಿತರಣೆ ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದವರ ಮನೆಗೆ ಹೋಗಿ ಬೆದರಿಕೆ ಹಾಕಿ, ಗೂಂಡಾಗಿರಿ ಮಾಡುತ್ತಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಸಿಡಿಪಿಓ ಹಿರೇಮನಿ ಮಾತನಾಡಿ ಈಗಾಗಲೆ ನಾವು ಚೋರಗಿ ಅಂಗನವಾಡಿ ಕರ್ಯಕರ್ತೆಗೆ ನೋಟಿಸ್ ಜಾರಿ ಮಾಡಿದ್ದೇವೆ, ಆದರೂ ಅವರು ಇನ್ನೂ ಅವರ ವರ್ತನೆ ಬದಲಿಸಿಲ್ಲ ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಂದ್ರಾಮ ಮೇಡೇದಾರ, ಶಾಂತು ಹೊಸಮನಿ, ಈರಣ್ಣ ಮೇಡೆದಾರ, ಭಾರತಿ ಬಿರಾದಾರ, ಪ್ರಭಾಕರ ಬಿರಾದಾರ, ಮಾದೇವ ಬಿರಾದಾರ, ಸತೀಶ ಬಿರಾದಾರ ಪ್ರಭಾಕರ ಹಲಸಂಗಿ, ಈರಣ್ಣ ಬೇನೂರ, ಮುರುಗೇಶ ಶಟಗಾರ, ದ್ಯಾಮಗೊಂಡ ಬೇವನೂರ ಮತ್ತಿತರರು ಇದ್ದರು.
29 ಇಂಡಿ 04: ತಾಲೂಕಿನ ಚೋರಗಿ ಗ್ರಾಮದಲ್ಲಿನ ಅಂಗನವಾಡಿ 1 ರ ಕಾರ್ಯಕರ್ತೆ ಸರಿಯಾಗಿ ಫಲಾನುಭವಿಗಳಿಗೆ ಆಹಾರ ಪದಾರ್ಥ ವಿತರಣೆ ಮಾಡುತ್ತಿಲ್ಲ.ಅವರನ್ನು ಕೂಡಲೆ ವಜಾ ಮಾಡಬೇಕು ಇಲ್ಲದಿದ್ದರೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸಿಡಿಪಿಓ ಸಂಗೀತಾ ಹಿರೇಮನಿ ಅವರಿಗೆ ಮನವಿ ಸಲ್ಲಿಸಿದರು.