ವರದಿಗೆ ಸ್ಪಂದನೆ: ರಸ್ತೆ ಮೇಲಿನ ತ್ಯಾಜ್ಯ ಸ್ವಚ್ಚತೆ
ಗುಳೇದಗುಡ್ಡ07: ಗುಳೇದಗುಡ್ಡದ ಬಸವೇಶ್ವರ ನಗರದಲ್ಲಿನ ಸಾರ್ವಜನಿಕ ಮುಕ್ತಿಧಾಮದ ಎದುರುಗಡೆ ನಿತ್ಯ ಹಸಿ ಕಸ ತಂದು ಚಲ್ಲುವ, ತ್ಯಾಜ್ಯ ಹಾಕುವ ಪರಿಪಾಟವಿದ್ದೂ ಅದನ್ನು ಸರಿಪಡಿಸುವಂತೆ ಭಾನುವಾರ ಲೋಕದರ್ಶನ ವರದಿ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಪುರಸಭೆ ಸ್ವಚ್ಚತೆಕೈಗೊಂಡಿದೆ. ಆದರೆ ಇದನ್ನು ಪ್ರತಿನಿತ್ಯ ಸ್ವಚ್ಚವಾಗಿಡಲು ಸಾರ್ವಜನಿಕರು ಪುರಸಭೆಗೆ ಆಗ್ರಹಿಸಿದ್ದಾರೆ.
ನಿತ್ಯ ಆ ಸ್ಥಳದಲ್ಲಿ ಹೊಲಸು ಮಾಡುವವರಿಗೆ ಕಠಿಣ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಮುಕ್ತಿಧಾಮಕ್ಕೆ ಹಲವಾರು ಬೇರೆ ಬೇರೆ ಊರುಗಳಿಂದ ಜನ ಶವಸಂಸ್ಕಾರಕ್ಕೆ ಬಂದು ಹೋಗುತ್ತಾರೆ. ಮುಕ್ತಿಧಾಮದ ಎದುರುಗಡೆ ಬಂದರೆ ಸಾಕು ಗಬ್ಬು ವಾಸನೆ ಬರುತ್ತದೆ. ಸೊಳ್ಳೆಗಳ ಹಾಗೂ ಹಂದಿಗಳ ಕಾಟವೂ ಇದರಿಂದ ಹೆಚ್ಚಾಗಿದೆ. ನಿತ್ಯ ಈ ಕೊಳಚೆ ಸ್ಥಿತಿ ಕಂಡು ಪುರಸಭೆಗೆ ಸಾರ್ವಜನಿಕರು ಹಾಗೂ ಶವಸಂಸ್ಕಾರಕ್ಕೆ ಬರುವ ನೂರಾರು ಹೊರಗಿನ ಊರುಗಳ ಜನ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮುಖ್ಯಾಧಿಕಾರಿಗಳು ದಿನಂಪ್ರತಿ ವಾರ್ಡಿಗೆ ಬೆಳಿಗ್ಗೆ ಸಂದರ್ಶನ ಮಾಡಿದರೆ ವಾರ್ಡ್ಗಳ ಅನೈರ್ಮಲ್ಯತೆ ತಿಳಿಯುತ್ತದೆ. ಆದರೆ ಮುಖ್ಯಾಧಿಕಾರಿಗಳು ಬೆಳಿಗ್ಗೆ ವಾರ್ಡ್ ಸಂಪರ್ಕನೇ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾರಣ ಮುಖ್ಯಾಧಿಕಾರಿಗಳು ಹಾಗೂ ಸ್ವಚ್ಚತಾ ಸಿಬ್ಬಂದಿ ನಿತ್ಯ ವಾರ್ಡ್ ವಿಜಿಟ್ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.