ನೆಹರು ಪಬ್ಲಿಕ್ ಶಾಲೆ ಪುನರಾರಂಭ
ಗುಳೇದಗುಡ್ಡ,ಆ.24: ಪಟ್ಟಣದ ನೆಹರು ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಶಾಲೆಯ ಪುನರಾರಂಭ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ್ ಜ್ಯೋತಿ ಬೆಳಗಿಸಿ ಶಾಲೆಯ ಪುನರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬೆಳಗುತ್ತಿರುವ ಜ್ಯೋತಿಯು ಎರಡು ವರ್ಷಗಳ ಕೋವಿಡ್ ಎನ್ನುವ ಮಹಾಮಾರಿಯ ಕತ್ತಲೆಯಿಂದ ಮತ್ತೇ ಬೆಳಕಿನೆಡೆಗೆ ಬಂದಂತಾಗಿದೆ. ಈ ಬೆಳಕು ಸದಾ ವಿದ್ಯಾರ್ಥಿಗಳ ಜೀವನದಲ್ಲಿ ನಂದಾದೀಪವಾಗಿ ಬೆಳಕನ್ನು ನೀಡಲಿ ಎಂದು ಆಶೀಸಿದರು.
ಶಾಲೆಯ ಪ್ರಾಚಾರ್ಯ ಬಸವರಾಜು ಎಚ್, ಎಂ. ಕಾಲೇಜಿನ ಪ್ರಾಚಾರ್ಯ ಮುತ್ತುರಾಜ ಕುಬಕಡ್ಡಿ ಸೇರಿದಂತೆ ಭೋದಕ ಮತ್ತು ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.