ರಾಣೆಬೆನ್ನೂರ

ರೇಣುಕಾಚಾರ್ಯರ ಜಯಂತಿ ಆಚರಣೆ ಕಾರ್ಯಕ್ರಮ

ರೇಣುಕಾಚಾರ್ಯರ ಜಯಂತಿ ಆಚರಣೆ ಕಾರ್ಯಕ್ರಮ

ರಾಣಿಬೆನ್ನೂರ 01:  ಸುಖ, ಸಾಮರಸ್ಯ ಬಾಳಿಗೆ ಜಗದ್ಗುರು ರೇಣುಕಾಚಾರ್ಯರರು ಬೋಧಿಸಿದ ಚಿಂತನೆಗಳು ಸರ್ವರಿಗೂ ದಾರಿ ದೀಪವಾಗಿವೆ ಎಂದು ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ನಗರದ ದೊಡ್ಡಪೇಟೆಯ ಆವರಗೊಳ್ಳ ಪಂಚಾಚಾರ್ಯ ಗುರು ಕಾರಣುಖ್ಯ ಮಂಗಲ ಮಂದಿರ ಹಿರೇಮಠದಲ್ಲಿ ತಾಲೂಕು ಜಂಗಮ ಸಮಾಜ ಹಾಗೂ ಜಂಗಮ ನೌಕರರ ವೇದಿಕೆಯಿಂದ ಏರ್ಪಡಿಸಿದ ರೇಣುಕಾಚಾರ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ವರ್ತಕ ಸಿದ್ದಲಿಂಗಸ್ವಾಮಿ ನೂರಂದೇವರಮಠ ಅವರು ರೇಣುಕಾಚಾರ್ಯರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್‌.ವಿ.ಉಜೈನಿಮಠ ಅವರು ರೇಣುಕಾಚಾರ್ಯರ ಜಯಂತಿ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಓಂಕಾರ ಸ್ವಾಮೀಜಿ ಸನ್ಮಾನಿಸಿದರು. 

ತಾಲ್ಲೂಕು ಜಂಗಮ ಸಮಾಜ ಹಾಗೂ ಜಂಗಮ ನೌಕರರ ವೇದಿಕೆಯ ಅಧ್ಯಕ್ಷ ಮುಕ್ತೇಶ್ವರ ಕೂರಗುಂದಮಠ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ವಿರೇಶ ಬಾಳಿಹಳ್ಳಿಮಠ, ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್‌. ಕೋರಧಾನ್ಯಮಠ, ವಿಶ್ವನಾಥಯ್ಯ ಅಜ್ಜೇವಡಿಮಠ, ನಿವೃತ್ತ ಪಿಎಸ್‌ಐ ಸಿ.ವಿ. ತಾವರಗೇರಿಮಠ, ವೀರಬಸಯ್ಯ ಹಿರೇಮಠ, ಪಿ.ವಿ. ಮಠದ, ಸುಭಾಸಗೌಡ ಪಾಟೀಲ, ಟಿ. ವೀರಣ್ಣ, ಕೊಟ್ರೇಶ ಅಜ್ಜೇವಡಿಮಠ, ಎಫ್‌.ಕೆ. ಭಸ್ಮಾಂಗಿಮಠ, ಗೀತಾ ಅಜ್ಜೇವಡಿಮಠ,  ಸುಮಂಗಲಾ ಹಿರೇಮಠ, ಮುತ್ತಣ್ಣ ಸುರಳಿಕೇರಿಮಠ, ಅಮೃತಗೌಡ ಪಾಟೀಲ, ಜಗದೀಶ ಮಳೇಮಠ, ಎಸ್‌.ವಿ. ಸಾಲೀಮಠ, ಎಂ.ಕೆ. ಸಾಲೀಮಠ, ನೇತ್ರಾವತಿ ಅಜ್ಜೇವಡಿಮಠ, ಸುವರ್ಣಮ್ಮ ಮಾಗನೂರಮಠ ಮತ್ತಿತರರು ಇದ್ದರು. 

ಪ್ರಕಾಶ ಗಚ್ಚಿನಮಠ ಸಂಗೀತ ಸೇವೆ ಸಲ್ಲಿಸಿದರು. ರಾಜು ಬೆಳವಿಗಿಮಠ ರೇಣುಕಾಚಾರ್ಯರ ಮೂರ್ತಿ ಪೂಜೆ ನಡೆಸಿದರು. ಶಿವಲಿಂಗೇಶ ಮತ್ತು ಮಹಾಂತೇಶ ನೂರಂದೇವರಮಠ ಕುಟುಂಬದವರು ಪ್ರಸಾದ ಸೇವೆ ನಡೆಸಿಕೊಟ್ಟರು. ಚನ್ನೇಶ್ವರ ವೈದಿಕ ಪಾಠಶಾಲೆ ಮತ್ತು ಶನೈಶ್ಚರ ಮಂದಿರದ ವಟುಗಳು ವೇದ ಘೋಷ ಮಾಡಿದರು. ಮಲ್ಲಿಕಾರ್ಜುನಸ್ವಾಮಿ ಹಾಲಸ್ವಾಮಿಮಠ ನಿರೂಪಿಸಿದರು. ಕಾರ್ಯದರ್ಶಿ ರವಿಕುಮಾರ ಪಾಟೀಲ ಸ್ವಾಗತಿಸಿದರು. ಶಿವಯೋಗಿ ಹಿರೇಮಠ ವಂದಿಸಿದರು. 


ಸುದ್ದಿ ಓದಿ