ಗುಳೇಗುಡ್ಡ

ರೇಣುಕಾಚಾರ್ಯ ಆದರ್ಶಗಳನ್ನು ರೂಢಿಸಿಕೊಳ್ಳಿ : ನಂಜಯ್ಯನಮಠ

ರೇಣುಕಾಚಾರ್ಯ ಆದರ್ಶಗಳನ್ನು ರೂಢಿಸಿಕೊಳ್ಳಿ : ನಂಜಯ್ಯನಮಠ

ಗುಳೇದಗುಡ್ಡ04: ರೇಣುಕಾಚಾರ್ಯರು, ಬಸವಣ್ಣನವರು ಹಾಗೂ ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಸಮಾನತೆ, ಜಾತ್ಯಾತೀತತೆಯ ಆದರ್ಶಗಳನ್ನು ನೀಡಿ, ಸತ್ಯ, ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದ್ದಾರೆ. ಅವರ ಚಿಂತನೆಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳೊಣವೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.ಅವರು ಪಟ್ಟಣದ ಮುರುಘಾಮಠದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲೂಕು ಮಟ್ಟದ ಆದಿಜಗದ್ಗುರು ರೇಣುಕಾಚಾರ್ಯ, ಬಸವೇಶ್ವರ ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮುಖಂಡ ಮುಚಖಂಡಯ್ಯ ಹಂಗರಗಿ ಮಾತನಾಡಿ, ಶರಣರು, ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಹೇಳಿದರು. ಎಸ್.ಆರ್. ನವಲಿಹಿರೇಮಠ ಮಾತನಾಡಿದರು. ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು, ಕಾಶೀನಾಥ ಮಹಾಸ್ವಾಮಿಗಳು,  ನೀಲಕಂಠ ಶಿವಾಚಾರ್ಯ ಶ್ರೀಗಳು,  ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು ವಿವೇಕಾನಂದ ದೇವರು, ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಸಮಾಜದ ಅಧ್ಯಕ್ಷ ಶಿವಾನಂದ ಮಳ್ಳಿಮಠ, ದ್ರಾಕ್ಷಾಯಣಿ ಹಿರೇಮಠ, ಕುಮಾರಗೌಡ ಜನಾಲಿ, ಉಮೇಶ ಶಿವನಗೌಡರ, ವಿಶ್ವನಾಥ ಹಿರೇಮಠ, ಬಂಡಯ್ಯ ಹಿರೇಮಠ, ಪ್ರಭು ತಟ್ಟಿಮಠ, ಅಕ್ಕಮ್ಮ ಶಿವಪ್ಪಯ್ಯನಮಠ, ಜಿ.ಸಿ.ಮಠ, ಸಂಗಯ್ಯ ಶಿವಪ್ಪಯ್ಯನಮಠ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.



ಸುದ್ದಿ ಓದಿ