ಕಾಗವಾಡ

ಪ್ರತಿಯೊಬ್ಬರು ಸಸಿ ನೆಟ್ಟು ಪರಿಸರವನ್ನು ಸ್ವಚ್ಛಂದವಾಗಿಡಿ: ಪಾಟೀಲ

ಪ್ರತಿಯೊಬ್ಬರು ಸಸಿ ನೆಟ್ಟು ಪರಿಸರವನ್ನು ಸ್ವಚ್ಛಂದವಾಗಿಡಿ: ಪಾಟೀಲ

ಲೋಕದರ್ಶನ ವರದಿ 

ಶೇಡಬಾಳ 06: ಮಾನವ ಇಂದು ತನ್ನ ಸ್ವಾರ್ಥಕ್ಕಾಗಿ ಗಿಡ, ಮರಗಳನ್ನು ಕಡಿದು ವಾತಾವರಣ ಕಲುಷಿತಗೊಳಿಸುತ್ತಿದ್ದಾರೆ. ಇದರಿಂದ ಈ ಭೂಮಂಡಲದ ಮೇಲೆ ದುಷ್ಪರಿಣಾಮ ಬೀರಿ ಪರಿಸರ ಮಾಲಿನ್ಯ ಉಂಟಾಗಿ ಮಳೆಯಾಗದೇ ಬರಗಾಲದ ಛಾಯೆ ಮೂಡುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪರಿಸರವನ್ನು ಸ್ವಚ್ಛಂದವಾಗಿಡಬೇಕೆಂದು ಕೈಮಗ್ಗ,ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ನುಡಿದರು. 

ಅವರು ಸೋಮವಾರ ದಿ. 6 ರಂದು ಕಾಗವಾಡ ಪಟ್ಟಣದ ಗುರುದೇವಾಶ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾ ವತಿಯಿಂದ ಶಾಮ್ ಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆ ನಿಮಿತ್ಯ ರಾಜ್ಯಾದ್ಯಂತ ಸೇವಾ ಸನ್ಮಾನ್ ಯೋಜನೆಯ ಮುಖಾಂತರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಹಿತ್ತಲಿನಲ್ಲಿ ತೋಟದಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರವನ್ನು ಸ್ವಚ್ಛವಾಗಿಡಬೇಕೇಂದರು. 

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮಿಜಿ ಆಶೀರ್ವಚನ ನೀಡಿದರು. 

ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ ಮಾತನಾಡಿ ನಾವೆಲ್ಲರೂ ಪರಿಸರ ರಕ್ಷಣೆಗೆ ಮುಂದಾಗದಿದ್ದರೆ ಮುಂದೊಂದು ದಿನ ಗಾಳಿ ಕೊರತೆಯಿಂದಾಗಿ ಉಸಿರಾಟಕ್ಕೂ ಸಮಸ್ಯೆ ಎದುರಿಸಬೇಕಾಗುತ್ತದೆ. ನಾವು ಈಗಲೇ ಎಚ್ಚೆತ್ತುಕೊಂಡು ಎಲ್ಲರು ಪರಿಸರ ಸಂರಕ್ಷಣೆ ಮಾಡೋಣ ಎಂದ ಅವರು ಶಾಮ್ ಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆ ನಿಮಿತ್ಯ ಪ್ರತಿಯೊಬ್ಬರು ಕನಿಷ್ಠ 10 ಮರಗಳನ್ನಾದರೂ ಬೆಳೆಸುತ್ತೇವೆಂದು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕೆಂದರು.  

ಮಂಡಲ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಪಿ.ಕೆ.ಪಿ.ಎಸ್‌. ಅಧ್ಯಕ್ಷ ಅಭಯಕುಮಾರ ಅಕಿವಾಟೆ, ಯೊಗೇಶ ಕುಂಬಾರ, ಅನೀಲ ನಾವಲಿಗೇರ, ಉತ್ಕರ್ಷ ಪಾಟೀಲ, ರವಿ ಪಾಟೀಲ, ಸುಭಾಷ ಕಟಾರೆ, ಸಂತೋಷ ಸೇಠ್, ಪ್ರಕಾಶ ಪಾಟೀಲ, ಸಚೀನ ಕಟಗೇರಿ, ಪ್ರಕಾಶ ಧೋಂಡಾರೆ, ಪ್ರಕಾಶ ಮಿರ್ಜಿ, ವಿಠ್ಠಲ ಪವಾರ, ಪ್ರಕಾಶ ಪಾಟೀಲ, ಸುನೀಲ ಮಾಳಿ, ಡಾ,ಮೋಹನರಾವ್ ಕಾರ್ಚಿ ಸೇರಿದಂತೆ ಅನೇಕರು ಇದ್ದರು. ಅರುಣ ಜೋಷಿ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು. 


ಸುದ್ದಿ ಓದಿ