ರಾಣೆಬೆನ್ನೂರ

ನಾಗದೇವತೆಗಳ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ

ನಾಗದೇವತೆಗಳ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ

ರಾಣೇಬೆನ್ನೂರು 12: ಪ್ರತಿಯೊಬ್ಬ ಮನುಷ್ಯನು  ತನ್ನ ಜೀವನದಲ್ಲಿ  ಸದಾ ಕಾಲ ಶಾಂತಿ, ನೆಮ್ಮದಿ, ಮತ್ತು ಆತ್ಮ ತೃಪ್ತಿಯ ಬದುಕನ್ನು ಕಾಣಬೇಕಾದರೆ, ಧರ್ಮದ ಅನುಯಾಯಿಗಳಾಗಿ ಸಾಗಬೇಕಾದ ಇಂದಿನ ಅಗತ್ಯವಿದೆ  ಎಂದು ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ, ವರ್ತಕ ಶೇಖಪ್ಪ ಹೊಸಗೌಡ್ರ ಹೇಳಿದರು.  

ಅವರು ಮಂಗಳವಾರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಮಹಾ ಚಂಡಿಕಾ ಯಾಗ ಹೋಮ, ಬನ್ನಿ ಮಹಾಂಕಾಳಿ  ಮತ್ತು ನಾಗದೇವತೆಗಳ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವರು ಧರ್ಮ, ಆಧ್ಯಾತ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಇವು ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಅಚಾನೋಚವಾಗಿ, ವೇದ ಇತಿಹಾಸ ಕಾಲಗಳಿಂದಲೂ ನಡೆದುಕೊಂಡು ಬಂದಿದೆ, ಅಂತಹ ಸಂಸ್ಕಾರದಲ್ಲಿ ನಾವೆಲ್ಲರೂ ಮುನ್ನಡೆದಾಗ ಮಾತ್ರ ಲೋಕ ಕಲ್ಯಾಣವಾಗಲು ಸಾಧ್ಯವಾಗುವುದು ಎಂದರು. 

ಬಹು ಇತಿಹಾಸಿಕವಾಗಿರುವ ಈ ಭಾಗದ ಶ್ರೀ ಬೆಂಚಿ ತುಂಗಾಜಲ ಚೌಡೇಶ್ವರಿದೇವಿಯು ನಗರ ಮತ್ತು ತಾಲೂಕಿನ ಭಕ್ತ ಸಮುದಾಯದ ಆರಾಧ್ಯ ದೇವಿಯಾಗಿ ನೆಲೆಸಿದ್ದಾಳೆ, ಎಲ್ಲರ ಸಹಕಾರದಿಂದ ಇಲ್ಲಿ  ಮೇಲಿಂದ ಮೇಲೆ ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಭಕ್ತರ ಅಭಿಸ್ಟೇ ಮತ್ತು ಅಭಿಲಾಷೆಯಂತೆ, ಮಹಾಗೋಪುರ ನಿರ್ಮಾಣವಾಗಿದೆ. ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಿಯ ಆಲಯದಲ್ಲಿ, ಬನ್ನಿ ಮಹಾಂಕಾಳಿ ನಾಗದೇವತೆ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಎಂದರು.           ದಾಸಪ್ಪನವರಿಗೆ ಗೋಪಾಳ, ಶ್ರೀದೇವಿಯ ಪಾಲಕಿ ಉತ್ಸವ ಮತ್ತಿತರೆ ಕಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಗಣ್ಯರಾದ ಕೆಪಿಟಿಸಿಎಲ್ ನಿವೃತ್ತ  ನೌಕರ ಬಸವರಾಜ ಮಳೆ ಮಠ ಸೇರಿದಂತೆ ಮತ್ತಿತರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಂಡಿಕಾ ಯಾಗ ಹೋಮವನ್ನು ನಾಗರಾಜ ವೈದ್ಯ ಮತ್ತು ತಂಡದವರು ಧಾರ್ಮಿಕ ವಿಧಿವತ್ತಾಗಿ ನೆರವೇರಿಸಿದರು. 

ನಡೆದ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಿತಿಯ ಧರ್ಮದರ್ಶಿಗಳಾದ, ಕರಬಸಪ್ಪ ಜಾಡರ, ಈರ​‍್ಪ ಮುದಗಣ್ಣನವರ್, ಏಕಾಂತ ಮುದಿಗೌಡ್ರ್‌, ಶಿವಪ್ಪ ಬೆನಕನಕೊಂಡ,ಪ್ರಮೋದ್ ಕೋಪರ್ಡ, ಲಕ್ಷ್ಮಣ ಸಾಲಿ, ಕುಮಾರ್ ಮಡಿವಾಳರ, ನಿಂಗಪ್ಪ ವಿಭೂತಿ, ದುರ್ಗಪ್ಪ ಹುಲಗಮ್ಮನವರ್, ವೀಣಾ ಹೊಸಗೌಡ್ರು, ಶಕುಂತಲಾ ಬೆನಕನಕೊಂಡ, ಸೇರಿದಂತೆ ಮತ್ತಿತರ ಗಣ್ಯರು, ಮಾರುತಿ ನಗರದ ಮುಖಂಡರು ಪಾಲ್ಗೊಂಡಿದ್ದರು ಪ್ರಧಾನ ಅರ್ಚಕರಾದ ಚಂದ್ರಶೇಖರ ಗದ್ದಿಮಠ  ಅವರು, ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ನಂತರ ನಡೆದ ಪ್ರಸಾದ ವಿತರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನದೊಂದಿಗೆ ಧನ್ಯತೆ ಪಡೆದರು. 


ಸುದ್ದಿ ಓದಿ