ಕಾಗವಾಡ

ತುಟ್ಟಿ ಭತ್ಯೆ ಪೂರ್ವಾನ್ವಯವಾಗಿ ಮಂಜೂರು: ಹರ್ಷ

ತುಟ್ಟಿ ಭತ್ಯೆ ಪೂರ್ವಾನ್ವಯವಾಗಿ ಮಂಜೂರು: ಹರ್ಷ

ಕಾಗವಾಡ 28: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಇದ್ದ ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘವು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕೊಡುಗೆಯಾಗಿ ರಾಜ್ಯ ಸರಕಾರಿ ನೌಕರರಿಗೆ ಶೇಕಡ 3ಅ  ತುಟ್ಟಿಭತ್ಯೆಯನ್ನು ದಿ. 01-07-2021ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಂಜೂರು ಮಾಡಿ ಸರ್ಕಾರಿ ಆದೇಶ ಹೊರಡಿಸಿದೆ. 

ಮನವಿ ಸಲ್ಲಿಸಿದ ಕೇವಲ 24 ಗಂಟೆಯೊಳಗಾಗಿ ಹಾಗೂ ಕೇಂದ್ರ ಸರಕಾರ ಮಂಜೂರು ಮಾಡಿದ ತುಟ್ಟಿ ಭತ್ಯೆಗೆ ಸರಿಸಮಾನವಾಗಿ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ ಮುಖ್ಯ ಮಂತ್ರಿಗಳಿಗೆ ಹಾಗೂ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ರವರಿಗೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲೆಯ ಅಧ್ಯಕ್ಷ ಜಗದೀಶ ಗೌಡಪ್ಪ ಪಾಟೀಲ ಅವರಿಗೆ ಮತ್ತು ಸಮಸ್ತ ರಾಜ್ಯ ಪದಾಧಿಕಾರಿಗಳಿಗೆ ಕಾಗವಾಡ ತಾಲೂಕು ರಾಜ್ಯ ಸರಕಾರಿ ನೌಕರರ ಪರವಾಗಿ ತಾಲೂಕು ಅಧ್ಯಕ್ಷ ಗೌಡಪ್ಪ ಮು ಸಡ್ಡಿ, ಕಾರ್ಯದರ್ಶಿ ಎಸ್‌.ಬಿ.ಹರ್ತಿ, ಖಜಾಂಚಿ ಜಿ.ವಾಯ್‌.ಶಿರಗಾವೆ, ರಾಜ್ಯ ಪರಿಷತ್ ಸದಸ್ಯ ಜಿ.ಟಿ.ಗುಗ್ಗರಿ, ಗೌರವಾಧ್ಯಕ್ಷ ಬಿ.ಬಿ.ಬೊರಗಲ್ ಹಾಗೂ ಪದಾಧಿಕಾರಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ. 


ಸುದ್ದಿ ಓದಿ