ಪ್ರಾ:ತ ಸ್ಮರಾಮಿ ಗ್ರಂಥ ಬಿಡುಗಡೆ, ಗಣೇಶೋತ್ಸವಕ್ಕೆ ಚಾಲನೆ
ರಾಣಿಬೆನ್ನೂರ,10 : ಹಿಂದೂಗಳು ಸಂಘಟಿತರಾಗಲು, ಜಾಗೃತಿ ಮೂಡಲು ಬ್ರಿಟೀಷರ ವಿರುದ್ದ ಹೋರಾಡುವ ಸಲುವಾಗಿಯೇ ಈ ಗಣೇಶ ಉತ್ಸವವನ್ನು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದು, ಈಗಲೂ ಸಹ ಗಣೇಶೋತ್ಸವವನ್ನು ಅದ್ದೂರಿ ಹಾಗೂ ವೈಭವದಿಂದ ಎಲ್ಲೆಡೆ ಆಚರಿಸುತ್ತಿರುವುದು ಹಿಂದೂ ಧರ್ಮದ ಜಾಗೃತಿಯ ಸಂಕೇತವಾಗಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ಹೇಳಿದರು.
ನಗರದ ನಗರಸಭಾ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಣೆಬೇನ್ನೂರು ಕಾ ರಾಜಾ ಗಣಪತಿಯ ನವದುರ್ಗಿಯರ ವೈಭವ ಗಣೇಶ ಮಂಟಪ ಹಾಗೂ ಸಾಧಕಿಯ ಮಹಿಳೆಯರ ಕುರಿತು ರಚಿಸಿರುವ ಪ್ರಾ:ತ ಸ್ಮರಾಮಿ ಎಂಬ ಗ್ರಂಥ ಬಿಡುಗಡೆ ಮಾಡಿ ಹಾಗೂ ಗಣೇಶೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸದ್ಯ ರಾಜ್ಯ ಹಾಗೂ ದೇಶದಲ್ಲಿ ಗಣೇಶ ಉತ್ಸವನ್ನು ಡ್ಯಾನ್ಸ್, ಹಾಡುಗಳು, ಕುಣಿತದ ಮೂಲಕ ಅಂತ್ಯವಾಗುತ್ತಿದೆ. ಆದರೆ ಗಣೇಶ ಹಬ್ಬವನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಮಾರ್ಾಡಿಸಿ ಅದನ್ನು ಹಬ್ಬವನ್ನಾಗಿ ಜನರಿಗೆ ತೋರಿಸಿದ ಮಂಡಳಿ ವಂದೇ ಮಾತರಂ ಸ್ವಯಂ ಸೇವಾ ಸಂಘವಾಗಿದೆ. ಇಂತಹ ಸಂಘ ಪ್ರತಿ ವರ್ಷವೂ ವಿಶೇಷವಾಗಿ, ವಿಭಿನ್ನವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ದೇಶದ ಜನರಿಗೆ ನಾವು ಅರಿವು, ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕೆ ನಾವು ಎಲ್ಲರೂ ಸೇರಿ ಇಂತಹ ವಿನೂತನ ಕಾರ್ಯಕ್ರಮ ಮೂಲಕ ರಾಷ್ಟ್ರದ ಪ್ರಜ್ಞೆ ಬಗ್ಗೆ ತಿಳಿಸಬೇಕು ಎಂದರು.
ಮಿಡಿಯಾ ಮಾಸ್ಟರ್ಸ್ ಸಂಪಾದಕ ಎಂ.ಎಸ್. ರಾಘವೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಗಣೇಶ ಉತ್ಸವ ಪ್ರಾರಂಭವಾಗಿದ್ದು ಉತ್ತರ ಕರ್ನಾಟಕದ ರಾಣೆಬೇನ್ನೂರು ನಗರದಿಂದ ಎಂಬುದು ವಿಶೇಷವಾಗಿದೆ. ಅಂದು ರಾಣಿಬೆನ್ನೂರು ನಗರದಲ್ಲಿ 1925-31 ರಲ್ಲಿ ನಗರದ ಮಾರ್ಕೆಟ್ ಗಲ್ಲಿಯಲ್ಲಿ ಮುದವೀಡು ಕೃಷ್ಣರಾಯರು ಪ್ರತಿಷ್ಠಾಪನೆ ಮಾಡಿದರು. ಅದರಂತೆ ರಾಣಿಬೇನ್ನೂರು ನಗರದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಘ ಸದಸ್ಯರು ಪ್ರತಿ ವರ್ಷವೂ ವಿನೂತನ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.
ಈ ಬಾರಿ ರಾಣಿಬೇನ್ನೂರು ನಗರದಲ್ಲಿ ವಿಶೇಷವಾಗಿ "ಪ್ರಾ:ತ ಸ್ಮರಾಮಿ" ಎಂಬ ಗ್ರಂಥ ರಚನೆ ಮಾಡುವ ರಾಜ್ಯ ಸೇರಿದಂತೆ ಜಿಲ್ಲೆಯ 37 ಮಹಿಳೆಯರ ಅವರ ಸಾಧನೆ ಬಗ್ಗೆ ಚಿತ್ರಿಸಿ ಅವರ ಜೀವನ ವಿವರಿಸಲಾಗಿದೆ. ಇದನ್ನು ಯಾಕೆ ಮಾಡಲಾಗಿದೆ ಎಂದರೆ ಭಾರತದಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಅಂತಹ ಮಹಿಳೆಯರ ಮೇಲೆ ದಿನ ನಿತ್ಯ ಅತ್ಯಾಚಾರ, ಶೋಷಣೆ ನಡೆಯುತ್ತಿರುವದು ನೋಡಿದರೆ ಸಮಾಜದಲ್ಲಿ ತೆಲೆ ತಗ್ಗಿಸುವ ಕೆಲಸವಾಗಿದೆ. ಇಂತಹ ಸಮಯದಲ್ಲಿ ನಾವು ಮಹಿಳೆಯರಿಗೆ ಧೈಯ ಮತ್ತು ಆತ್ಮಸ್ರ್ಥ್ಯ ತುಂಬಬೇಕು ಎಂಬ ಉದ್ದೇಶದಿಂದ ನವದುರ್ಗಿಯರ ವೈಭವದ ಮೂಲಕ ಮಹಿಳೆಯರ ಸಬಲತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ವಂದೇ ಮಾತರಂ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಈ ವರ್ಷ ನಮ್ಮ ಸಂಸ್ಥೆಯ ವತಿಯಿಂದ ನವ ದುರ್ಗೆಯರ ವೈಭವದ ಕುರಿತು ಗೌರಿ ಗಣೇಶೋತ್ಸವವನ್ನು ಬಹಳಷ್ಟು ಅರ್ಥಗರ್ಭಿತವಾಗಿ ವಿನೂತನ ಶೈಲಿಯಲ್ಲಿ ವೈಭವಿಕರಿಸಲಾಗಿದೆ. ನವದುರ್ಗೆಯರ ಇತಿಹಾಸದ ಜೊತೆಗೆ 37 ಮಹಿಳಾ ಮಣಿಗಳ ಮಹತ್ವವನ್ನು ಇಲ್ಲಿ ಸಾಧರಪಡಿಸಲಾಗಿದೆ. ಜೊತೆಗೆ ಅವರುಗಳ ಕಾರ್ಯವನ್ನು ಪುಸ್ತಕದ ರೂಪದಲ್ಲಿ ವಿವರಿಸಲಾಗಿದೆ. ಗಣೇಶನ ದರ್ಶನಕ್ಕೆ ಬರುವ ಎಲ್ಲ ಭಕ್ತರಿಗಾಗಿ ಪ್ರಾತ:ಸ್ಮರಾಮಿ ಪುಸ್ತಕ ಉಚಿತವಾಗಿ ವಿತರಿಸಲಾಗುವುದು ಎಂದರು. ನಗರಸಭೆ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಲೇಖಕರಾದ ಪ್ರಮೋದ್ ನಲವಾಗಲ, ಪ್ರೇಮಕುಮಾರ ಬಿದರಕಟ್ಟಿ, ಅಜೇಯ ಮಠದ, ಜಗದೀಶ ಗೌಡಶಿವಣ್ಣನವರ ಸೇರಿದಂತೆ ಮತ್ತಿತರರು ಇದ್ದರು.