ಅಂಬೇಡ್ಕರ್ ಮಹಾನಾಯಕ ಬ್ಯಾನರ್ ಲೋಕಾರ್ಪಣೆ
ಗುಳೇದಗುಡ್ಡ 21: ತಾಲೂಕಿನ ಕಾಟಾಪುರ ಗ್ರಾಮದಲ್ಲಿ ವಿವಿಧ ಸಮಾಜಗಳ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಹಾಗೂ ಅದರ ಅಂಗವಾಗಿ ಡಾ.ಅಂಬೇಡ್ಕರ್ ಮಹಾನಾಯಕ ಬ್ಯಾನರ್ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಕಾಟಾಪುರ ಗ್ರಾಮದ ಕಿಳ್ಳೆಕ್ಯಾತರ, ವಡ್ಡರ, ಚಲವಾದಿ ಹಾಗೂ ಮಾದರ ಸಮಾಜ ಸೇರಿದಂತೆ ಗ್ರಾಮದ ಹಲವು ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ ಮಹಾನಾಯಕ ಬ್ಯಾನರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಬಹುಜನ ಚಳುವಳಿ ಸಂಘದ ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಯಲ್ಲಪ್ಪ ಮಾದರ, ಮದ್ದಾನೆಪ್ಪ ಕಿಳ್ಳೆಕ್ಯಾತರ, ಸಿದ್ದಪ್ಪ ಮಾದರ, ಬಸವರಾಜ ಚಲವಾದಿ, ಯಮನಪ್ಪ ವಡ್ಡರ, ಹನಮಂತ ಮಾದರ, ಲಕ್ಷ್ಮಣ ಕಿಳ್ಳೆಕ್ಯಾತರ, ಕಾರಪ್ಪ ಕಿಳ್ಳೆಕ್ಯಾತರ, ವೀರಭದ್ರ ಚಲವಾದಿ, ಶಂಕ್ರಪ್ಪ ಕಿಳ್ಳೆಕ್ಯಾತರ, ದುರಗಪ್ಪ ವಡ್ಡರ, ದ್ಯಾಮಣ್ಣ ಕಿಳ್ಳೆಕ್ಯಾತರ ಹಾಗೂ ಕಾಟಾಪೂರ ಗ್ರಾಮದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.