ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ದಾಖಲಾತಿ :ರೇವಡಿಗಾರ
ಇಂಡಿ12: ಶನಿವಾರ ಕಂದಾಯ ಇಲಾಖೆಯಿಂದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಇಂಡಿ ಗ್ರೇಡ್-2 ತಹಶೀಲ್ದಾರ ಆರ್.ಎಸ್. ರೇವಡಿಗಾರ ಮಾತನಾಡಿ ಸರಕಾರ ರೈತರಿಗೆ ತೊಂದರೆಯಾಗದಂತೆ ಕಂದಾಯ ದಾಖಲೆಗಳನ್ನು ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಯೋಜನೆ ರೂಪಿಸಿದೆ.
ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಓ ಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳೆಲ್ಲರೂ ಇಂದು ರೈತರ ಮನೆ-ಮನೆಗೆ ತೆರಳಿ ದಾಖಲಾತಿ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.
ಕಂದಾಯ ನೀರೀಕ್ಷಕ ಬಸವರಾಜ ರಾವೂರ ಮಾತನಾಡಿ, ಈ ಮೊದಲು ಪಹಣಿ ಹಾಗೂ ಜಾತಿ-ಆದಾಯ ಪ್ರಮಾಣ ಪತ್ರ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಈಗ ಸರಕಾರವೇ ನಿಮ್ಮ ಮನೆ ಬಾಗಿಲಿಗೆ ನಿಮ್ಮ ದಾಖಲಾತಿಗಳನ್ನು ಒದಗಿಸುತ್ತಿದೆ ಎಂದರು.
ಬನ್ನಮ್ಮ ಹದರಿ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಚವಡಿಹಾಳ, ವಿದ್ಯಾ ಸರಸಂಬಿ, ಗುರುಶಾಂತ ಬಿರಾದಾರ ಮತ್ತಿತರರು ಇದ್ದರು.