ರಾಣೆಬೆನ್ನೂರ

ಮಣಿಪಾಲ್ ಆರೋಗ್ಯ ಕಾರ್ಡ್‌ 2024ರ ನೋಂದಣಿ ಆರಂಭ

ಮಣಿಪಾಲ್ ಆರೋಗ್ಯ ಕಾರ್ಡ್‌ 2024ರ ನೋಂದಣಿ ಆರಂಭ

ರಾಣಿಬೆನ್ನೂರ 29: ಮಣಿಪಾಲ್ ಆರೋಗ್ಯ ಕಾರ್ಡ್‌ 2024ರ ನೋಂದಣಿಯು  ಆರಂಭಗೊಂಡಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯು ದೂರದರ್ಶಿತ್ವದ ನಾಯಕ  ಡಾ. ಟಿ.ಎಂ.ಎ. ಪೈ, ಅವರ ಸಮರೆ​‍್ಣ ಮತ್ತು ಸಮಾಜ ಸೇವೆಯಲ್ಲಿ ಬದ್ಧತೆ ಅಸಾಧಾರಣವಾಗಿ ಅಪರೂಪ. ಅವರ ಕನಸನ್ನು ನನಸಾಗಿಸುವಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡುವುದು ಈ ಕಾರ್ಡ್‌ನ ಉದ್ದೇಶವಾಗಿದೆ ಎಂದು ಮಣಿಪಾಲ್ ಕಸ್ತೂರ್ಬಾ  ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ  ಹೇಳಿದರು. 

ನಗರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ್ ಆರೋಗ್ಯ ಕಾರ್ಡ್‌ ಇಡೀ ಕುಟುಂಬಕ್ಕಾಗಿ, ಉತ್ತಮ ಮೌಲ್ಯ, ವಿಶ್ವಾಸಾರ್ಹ ಸೇವೆ ಎಂಬ ಅಡಿಬರಹದ ಅಡಿಯಲ್ಲಿ, ಎಲ್ಲಾ ಸದಸ್ಯರಿಗೆ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು. 

ಕುಲಾಧಿಪತಿ ಡಾ. ರಾಮದಾಸ್ ಪೈ ಅವರ ನೇತೃತ್ವದಲ್ಲಿ 2000 ರಲ್ಲಿ ಪ್ರಾರಂಭವಾದ ಮಣಿಪಾಲ್ ಆರೋಗ್ಯ  ಕಾರ್ಡ್‌ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಶ್ರಮಿಸುತ್ತಿದೆ. ಉಚಿತ ಆರೋಗ್ಯ ಸೇವೆಯನ್ನು ನೀಡುವುದು ಸವಾಲಿನದ್ದಾಗಿದ್ದರೂ, ಈ ಉಪಕ್ರಮವು ರಿಯಾಯಿತಿ  ವೆಚ್ಚದಲ್ಲಿ ಆರೋಗ್ಯ ಸೇವೆಯನ್ನು  ಖಚಿತಪಡಿಸುತ್ತದೆ ಎಂದರು.  

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭವಾಗಿ  ಕರಾವಳಿ ಮತ್ತು ಮಧ್ಯ ಕರ್ನಾಟಕದ 12-15 ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ . ಕಳೆದ 23 ವರ್ಷಗಳಲ್ಲಿ, ಮಣಿಪಾಲ್ ಆರೋಗ್ಯ ಕಾರ್ಡ್‌ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿದೆ, 2023 ರಲ್ಲಿ 360,000 ಸದಸ್ಯರು  ನೋಂದಾಯಿಸಿಕೊಂಡಿದ್ದಾರೆ , ಇದು ಅದರ ಬೆಳೆಯುತ್ತಿರುವ ಜನಪ್ರಿಯತೆಗೆ ಸಾಡ್ಷಯಾಗಿದೆ ಎಂದರು. 

ಮಣಿಪಾಲ್ ಆರೋಗ್ಯ ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್‌ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ 50ಅ ರಿಯಾಯಿತಿ, ರೋಗ ನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆ ಸೇವೆಯಲ್ಲಿ 25ಅ ರಿಯಾಯಿತಿ, ರೇಡಿಯಾಲಜಿ , ಹೊರರೋಗಿ  ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ 20ಅ ರಿಯಾಯಿತಿ,  ಡಯಾಲಿಸಿಸ್‌ನಲ್ಲಿ 100 ರಿಯಾಯಿತಿ, ಆಸ್ಪತ್ರೆಯ  ಓಷಧಿಗಳ ಮೇಲೆ 10ಅ ವರೆಗೆ ರಿಯಾಯಿತಿ ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ (ಕಾನ್ಸುಮಬೆಲ್ಸ್‌ ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ) 25ಅ ರಿಯಾಯಿತಿ ಸೌಲಭ್ಯವಿದೆ ಎಂದು ತಿಳಿಸಿದರು. 

ಕಾರ್ಡ್‌ದಾರರು ಕಸ್ತೂರ್ಬಾ  ಆಸ್ಪತ್ರೆ ಮಣಿಪಾಲ, ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲು, ಮಣಿಪಾಲ ಆಸ್ಪತ್ರೆ  ಗೋವಾ ಮತ್ತು ಮಣಿಪಾಲ ಹಾಗೂ ಮಂಗಳೂರಿನಲ್ಲಿನ  ದಂತ ಕಾಲೇಜುಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಮಣಿಪಾಲ ಮತ್ತು ಮಂಗಳೂರಿನಲ್ಲಿ ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ 9980854700 / 08202923748 ಅನ್ನು ಸಂಪರ್ಕಿಸಿ. ಎಲ್ಲಾ ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು ಎಂದು ಹೇಳಿದರು. 

ಹೆಚ್ಚಿನ ಮಾಹಿತಿಗಾಗಿ ರಾಣೆಬೆನ್ನೂರು ನಗರದ ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರದ ಮಾಲತೇಶ್ ವಿಭೂತಿ 9743003887, ಚೈತ್ರ ವಿಭೂತಿ 9513652233, ಗಿರಿಶೇಖರ್ ವಿಭೂತಿ 9845320927, 8105811327, ಗೋಪಿ 9844405075, ತಾಲೂಕಿನ ಕುಮಾರಪಟ್ಟಣದ ಡಾ. ಹೆಚ್‌.ವಿ ಉಮೇಶ್ 9481715961 ಇವರನ್ನು  ಸಂಪರ್ಕಿಸಬೇಕು  ಎಂದು ಮೋಹನ್ ಶೆಟ್ಟಿ  ತಿಳಿಸಿದರು. 

ಪತ್ರಿಕಾ ಗೋಷ್ಟಿಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್, ಉಪ ವ್ಯವಸ್ಥಾಪಕ ಕೃಷ್ಣಪ್ರಸಾದ್ ಬಿ.ಎಸ್, ಮಾರುಕಟ್ಟೆ ವಿಭಾಗದ ಪ್ರತಿನಿಧಿಯಾದ  ಅನಿಲ್ ನಾಯ್ಕ್‌, ಮಾಲತೇಶ್ ವಿಭೂತಿ, ಗಿರಿಶೇಖರ್ ವಿಭೂತಿ ಉಪಸ್ಥಿತರಿದ್ದರು. 


ಸುದ್ದಿ ಓದಿ