ಎಸ್ ಪಿ ಬಿ ಆರೋಗ್ಯದಲ್ಲಿ ಚೇತರಿಕೆ; ಸಹೋದರಿ ಎಸ್ .ಪಿ. ಶೈಲಜಾ ಹೇಳಿಕೆ
ಚೆನ್ನೈ ಆಗಸ್ಟ್ 18: ಸಂಗೀತ ಪ್ರಿಯರಿಗೆ ಶುಭಸುದ್ದಿ. ಕಳೆದ ಕೆಲ ದಿನಗಳಿಂದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಆರೋಗ್ಯ ವಿಷಯದಲ್ಲಿ ತೀವ್ರ ಕಳವಳಗೊಂಡಿದ್ದ ಅಭಿಮಾನಿಗಳಿಗೆ ಡಾ. ಎಸ್ ಪಿ ಬಿ ಸಹೋದರಿ ಎಸ್ ಪಿ. ಶೈಲಜಾ ಮಂಗಳವಾರ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ.
ಸಹೋದರನಿಗೆ ವೆಂಟಿಲೇಟರ್ ತೆಗೆದಿದ್ದು ಪ್ರಸ್ತುತ ತುತರ್ು ಚಿಕಿತ್ಸಾ ಘಟಕದಲ್ಲಿದ್ದರೂ ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಸಹೋದರ ಶೀಗ್ರ ಚೇತರಿಸಿಕೊಳ್ಳಲಿ ಎಂದು ಪ್ರಾಥರ್ಿಸುತ್ತಿದ್ದ ಅಭಿಮಾನಿಗಳೆಲ್ಲರಿಗೂ ಈ ಸಂದರ್ಭದಲ್ಲಿ ಶೈಲಜಾ ಕೃತಜ್ಞತೆ ಸಲ್ಲಿಸಿದ್ದಾರೆ.
ಎಸ್ ಪಿಬಿ ಆರೋಗ್ಯ ಸುಧಾರಿಸುತ್ತಿರುವುದಕ್ಕೆ ವೈದ್ಯರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಎಸ್ ಪಿಬಿ ಆರೋಗ್ಯ ಕ್ಷೀಣಿಸಿದ್ದರಿಂದ, ಅವರಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೆಲ್ತ್ ಬುಲೆಟಿನ್ ಬಿಡುಗಡೆಮಾಡಿದ್ದರು. ಎಸ್ ಪಿ ಬಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸಿನಿಮಾ ರಂಗದ ಪ್ರಮುಖರು ಪ್ರಾಥರ್ಿಸುತ್ತಿದ್ದಾರೆ.