ಗ್ರಾಮೀಣ ನೆಲಮೂಲದ ನೈಜ ಕ್ರೀಡೆಗಳು ಉಳಿಸಬೇಕಾಗಿದೆ : ಡಾ,ಕೃಷ್ಣವೇಣಿ ಜಾದವ್
ಗ್ರಾಮೀಣ ನೆಲಮೂಲದ ನೈಜ ಕ್ರೀಡೆಗಳು ಉಳಿಸಬೇಕಾಗಿದೆ : ಡಾ,ಕೃಷ್ಣವೇಣಿ ಜಾದವ್
ರಾಣೇಬೆನ್ನೂರು 12: ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಪರಿಣಾಮ ನೈಜವಾಗಿರುವ ದೈಹಿಕ ಕಸರತ್ತು ಇಂದು ಮರೆಯಾಗಿ ಮಾನಸಿಕ ಶಾಂತಿ ಮತ್ತು ನೆಮ್ಮದಿ ಇಲ್ಲದೆ ಹಿಂದಿನ ಬಹುತೇಕ ಯುವ ಜನಾಂಗವು ಮನೋವಿಕಾರತೆ ಹೊಂದುವಂತಾಗಿದೆ ಎಂದು ಕಾಗಿನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣವೇಣಿ ಹರೀಶ್ ಜಾದವ ಹೇಳಿದರು. ಅವರು ತಾಲೂಕಿನ ಕರೂರ ಗ್ರಾಮದಲ್ಲಿ ವಿಷ್ಣುಸೇನಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ ಸಂಘವು 69 ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ, ರಾಜ್ಯಮಟ್ಟದ ಗ್ರಾಮೀಣ ಖೋ ಖೋ, ಪಂದ್ಯಾವಳಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗ್ರಾಮೀಣ ಸಂಸ್ಕೃತಿಗೆ ಬಹುದೊಡ್ಡ ಇತಿಹಾಸ ಪರಂಪರೆ ಇದೆ. ಯುವ ಜನತೆ ನಾಡಿನ ಕಲೆ,ಜನಪದಸಾಹಿತ್ಯ, ಸಂಗೀತ, ಮತ್ತು ಬಹು ವಿಧ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮುಂದಾಗುತ್ತಿದ್ದರು. ಇಂದು ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುವಂತಾಗಿದೆ ಎಂದು ವಿಷಾದಿಸಿದರು.
ಗ್ರಾಮೀಣ ಸಂಸ್ಕೃತಿ, ಆಚಾರ ವಿಚಾರ, ಮತ್ತು ಮಾನವೀಯ ಗುಣಧರ್ಮವೇ ನಮ್ಮ ಐತಿಹಾಸಿಕ ಪರಂಪರೆ. ಗ್ರಾಮ ಸಂಸ್ಕೃತಿ ಉಳಿದು ಬೆಳೆಯಬೇಕಾದರೆ, ಇಂತಹ ಗ್ರಾಮೀಣ ಕಲೆಗಳು ನಶಿಸಿಹೋಗದಂತೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದರು.. ಗ್ರಾಪಂ ಅಧ್ಯಕ್ಷೆ ಶ್ರೀಮತಿ ಲಲಿತವ್ವ ನಾಗಪ್ಪ ಹಿರೇಬಿದರಿ, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ಬ ಬ್ಯಾಡಗಿ ಅವರು ಸಮಾರಂಭ ಉದ್ಘಾಟಿಸಿದರು ಸಂತೋಷ್ ಮುಡದ್ಯಾವಣ್ಣನವರ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಾಲತೇಶ ಶೇ. ಮಣಕೂರು ಗ್ರಾಪಂ ಸದಸ್ಯರಾದ ಮಾಲತೇಶ ಕಡತಿ, ಮಾಲತೇಶ ಪೂಜಾರ, ಹಳದಪ್ಪ ಓಲೆಕಾರ್, ವಿಷ್ಣುಸೇನಾ ಸಂಘಟನೆಯ ಬಸವರಾಜ ಕಚ್ಚರಬಿ, ಹೈದರಲಿ ಬಿರಾದಾರ, ಬಸವರಾಜ ಸುರ್ವೆ, ಬಸವರಾಜ ಮಾಟೇರ, ತಿಪ್ಪೇಶ್ ಲೆಕ್ಕಿಕೊನಿ, ಸೇರಿದಂತೆ ಗ್ರಾಮದ ಮುಖಂಡರು ಮತ್ತಿತರ ಗಣ್ಯರು, ಯುವಕರು ಉಪಸ್ಥಿತರಿದ್ದರು. ಖೋ. ಖೋ. ಸ್ಪರ್ಧಾ ನಿರ್ಣಾಯಕರಾಗಿ, ಎಲ್ಲಪ್ಪ ಹಲವಾಗಲ, ಶಿವಕುಮಾರ್, ಪ್ರಕಾಶ್ ಬೋಸ್ಲೆ, ಜಮಾನಸಾಬ್ ತಾವರಗೊಂದಿ, ಪಾಲ್ಗೊಂಡಿದ್ದರು. ಸ್ಪರ್ಧಾ ವಿಜೇತರು : ಬ್ರಹ್ಮಲಿಂಗೇಶ್ವರ ಎತ್ತಿನಹಳ್ಳಿ ( ಪ್ರಥಮ ) ವಿಷ್ಣು ಸೇನಾ ಸ್ಪೋರ್ಟ್ಸ ಕ್ಲಬ್ ( ದ್ವಿತೀಯ ) ಸಂಶಿ ಸ್ಪೋರ್ಟ್ಸ ಕ್ಲಬ್ ( ತೃತಿಯ ) ಹೊಳೆ ಆನ್ವೇರಿ ಉತ್ತಮ ತಂಡ. ವಿಜೇತ ತಂಡಗಳಿಗೆ ಕ್ರಮವಾಗಿ 10,7, ಮತ್ತು5 ಸಾವಿರ ರೂಗಳು ಹಾಗೂ ಆಕರ್ಷಕ ಪಾರಿತೋಷಕ ವಿತರಿಸಿ ಗೌರವಿಸಲಾಯಿತು.