ಪಂಚಮಸಾಲಿಗೆ 2ಎ ಮೀಸಲಾತಿಗಾಗಿ ರಾಜೀನಾಮೆಗೂ ಸಿದ್ಧ: ಶಾಸಕ ರಾಜು ಕಾಗೆ
ಕಾಗವಾಡ 09: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಯಾವುದೇ ಹುದ್ದೆ ತ್ಯಜಿಸಲು ತಾವು ಸಿದ್ದ ಎಂದು ಕಾಗವಾಡ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು.
ಅವರು ಸೋಮವಾರ ದಿ. 08 ರಂದು ಉಗಾರ ಖುರ್ದ ಪಟ್ಟಣದ ತಮ್ಮ ಕಚೇರಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ಹೋರಾಟದ ಕುರಿತು ಪೂರ್ವಭಾವಿ ಸಭೆಯಲ್ಲಿ ಕೂಡಲ ಸಂಘಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಮನವಿ ಸ್ವೀಕರಿಸಿ, ಮಾತನಾಡುತ್ತಿದ್ದರು. ಲಿಂಗಾಯತ ಪಂಚಮಸಾಲಿ ಸಮುದಾಯದ ಎಲ್ಲ ಪಕ್ಷದ ಶಾಸಕರು ಪಕ್ಷಾತೀತವಾಗಿ 2ಎ ಮೀಸಲಾತಿಗಾಗಿ ರಾಜೀನಾಮೆ ನೀಡಿದರೇ ಯಾವುದೇ ಸರ್ಕಾರ ಇದ್ದರೂ ಅದು ಮಂಡಿಯೂರಲೇ ಬೇಕು. ಹೀಗಾಗಿ ಮೀಸಲಾತಿಗಾಗಿ ಯಾವುದೇ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ಇನ್ನೂ ಇದೇ ವೇಳೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಾವು ಅನ್ಯ ಸುಮುದಾಯದ ವಿರೋಧಗಳು ಅಲ್ಲ. ಬದಲಾಗಿ ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕೂ ಮೀಸಲಾತಿ ನೀಡಬೇಕು ಎಂಬುದೇ ನಮ್ಮ ಬೇಡಿಕೆಯಾಗಿದೆ. ಇದನ್ನು ಅನ್ಯ ಸುಮುದಾಯಗಳು ತಪ್ಪಾಗಿ ಅರ್ಥೈಸಿ ಕೊಳ್ಳಬಾರದು. ಮೀಸಲಾತಿಗಾಗಿ ನಡೆದ ಹೋರಾಟ ಯಶಸ್ವಿ ಕಾಣುವ ಹಂತದಲ್ಲಿ ಇದ್ದು, ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ವಿಧಾನ ಸೌಧದಲ್ಲಿ ಈ ಕುರಿತು ಧ್ವನಿ ಎತ್ತಲು ಸಮುದಾಯದ ಶಾಸಕರ ಮನೆ-ಮನೆಗೆ ತೆರಳಿ, ಮನವಿ ಪತ್ರ ನೀಡುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಅದರಂತೆ ಶಾಸಕ ರಾಜು ಕಾಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ನಮ್ಮ ಸಮುದಾಯದ ಬೇಡಿಕೆಗಾಗಿ ಅವರು ಗಟ್ಟಿ ಧ್ವನಿಯಲ್ಲಿ ಸದನದಲ್ಲಿ ಹೋರಾಟ ಮಾಡುವ ಭರವಸೆ ನಮಗಿದೆ ಎಂದರು.
ಮೃಣಾಲ ಹೆಬ್ಬಾಳಕರ ಸೇರಿದಂತೆ ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡರು.
ಆರ್.ಕೆ. ಪಾಟೀಲ, ನಿಂಗಪ್ಪ ಪೀರೋಜೆ, ಮೃಣಾಲ್ ಹೆಬ್ಬಾಳಕರ, ರಮೇಶಗೌಡ ಪಾಟೀಲ, ಉಮೇಶ ಪಾಟೀಲ, ಬಸನಗೌಡ ಪಾಟೀಲ, ಜೋತಿಕುಮಾತ ಪಾಟೀಲ, ರಾಜು ಕಡೋಲೆ, ಡಾ.ಅರವಿಂದ ಕಾರ್ಚಿ, ಅನೀಲ ಸತ್ತಿ, ವಿಶ್ವನಾಥ ನಾಮದಾರ, ಅಕ್ಷಯ ಪಾಟೀಲ, ಮುರಗೇಶ ಕುಂಬಾರ, ಸತೀಶ ಬಿರಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.