ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸಲು ಸಿದ್ಧ : ಮಮದಾಪೂರ
ಮುಂಬರುವ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ
ಗುಳೇದಗುಡ್ಡ.ಜು.16: ನಾನು ಕೂಡಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದು, ಸಿದ್ಧರಾಮಯ್ಯನವರು ಮತ್ತೆ ಸ್ಪರ್ಧಿಸಿದರೇ ಅವರ ವಿರುದ್ಧ ನಾನು ಸ್ಪರ್ಧಿಸಲು ಸಿದ್ಧನಿದ್ದು, ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುವೆ ಎಂದು ಬಿಜೆಪಿ ಮುಖಂಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಹೇಳಿದ್ದಾರೆ.
ಶುಕ್ರವಾರ ಧರಣಿನಿರತ ನೇಕಾರರ ಸ್ಥಳಕ್ಕೆ ಬೇಟೀನೀಡಿದ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶೆಗೆಗಳಿಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ನಾನಷ್ಟೇ ಅಲ್ಲದೇ ಇತರರು ಸಹ ಆಕಾಂಕ್ಷಿಗಳಿದ್ದು, ಪಕ್ಷ ಯಾರಿಗೆ ಟಿಕೇಟ್ ನೀಡಿದರು ಗೆಲವುವಿಗೆ ಶ್ರಮಿಸಲು ಸಿದ್ಧ. ಒಂದು ವೇಳೆ ಪಕ್ಷ ಏನಾದರು ನನಗೆ ಅವಕಾಶ ನೀಡಿದರೆ ನಾನು ಚುನಾವಣೆ ಎದುರಿಸಲು ಸಿದ್ದನಿದ್ದೇನೆ ಎಂಬ ಆತ್ಮವಿಶ್ವಾಸ ನನಗೆ ಇದೆ ಎಂದರು.
ಕಳೇದ ಬಾರಿ ಚುನಾವಣೆಯಲ್ಲಿ ಸಿದ್ಧರಾಮಯ್ಯನವರು ಸ್ಪರ್ಧಿಸಿದ್ದರಿಂದ ಅವರಿಗೆ ಪ್ರಬಲ ಪೈಪೋಟಿ ನೀಡಬೇಕೆನ್ನುವ ಸಲುವಾಗಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತು. ಅವರು ಅತಿ ಕಡಿಮೆ ಅಂತರದಿಂದ ಸೋತರು. ಸಿದ್ಧರಾಮಯ್ಯನವರ ವಿರುದ್ಧ ಚುನಾವಣೆ ಗೆಲ್ಲಲು ನಮ್ಮ ಪಕ್ಷದವರೆಲ್ಲರೂ ಸೇರಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. ಪಕ್ಷ ಯಾರಿಗೆ ಟೀಕೇಟ್ ನೀಡಿದರು ಪಕ್ಷದ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ವೈ ಮನಸ್ಸು ಬಿಟ್ಟು ಶ್ರಮಿಸಿದಾಗ ಸಿದ್ಧರಾಮಯ್ಯನವರನ್ನು ಸೋಲಿಸಲು ಸಾಧ್ಯವಾಗುತ್ತದೆ. ಚುನಾವಣೆಯಲ್ಲಿ ನಾವು ಇಷ್ಟೇ ಮತಗಳನ್ನು ಪಡೆಯುತ್ತೇವೆ ಅಂತಾ ಹೇಳುವುದು ಅದು ನಮ್ಮ ಆತ್ಮವಿಶ್ವಾಸವಾಗಿದ್ದು, ಕೊನೆಗೆ ಜನರ ಆದೇಶವೇ ಅಂತಿಮವಾಗಿದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರ ಪಟ್ಟಣಶೆಟ್ಟಿ, ರಂಗಪ್ಪ ಶೇಬಿನಕಟ್ಟಿ, ಸಂಗಣ್ಣ ಪಟ್ಟಣಶೆಟ್ಟಿ, ಶರಣು ಚಿಕ್ಕನರಗುಂದ ಇದ್ದರು.