ಹೂವಿನ ಹಡಗಲಿ

ಗದಗ -ಹರಪನಹಳ್ಳಿ ರೈಲ್ವೆ ಯೋಜನೆ ಮರು ಪ್ರಸ್ತಾವ: ಜಗದೀಶ್ ಶೆಟ್ಟರ್

ಗದಗ -ಹರಪನಹಳ್ಳಿ ರೈಲ್ವೆ ಯೋಜನೆ ಮರು ಪ್ರಸ್ತಾವ: ಜಗದೀಶ್ ಶೆಟ್ಟರ್

ಹೂವಿನಹಡಗಲಿ 22: ’ವಾಲ್ಮೀಕಿ ನಿಗಮದ ಹಣ ವರ್ಗಾವಣೆಮತ್ತು ಮುಡಾ ನಿವೇಶನ ಹಂಚಿಕೆ ಹಗರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸಿದ್ದಾರೆ. ಈ ರೀತಿ ಬೆದರಿಕೆ ತಂತ್ರ ಅನುಸರಿಸುವ ಬದಲು ಕಾಂಗ್ರೆಸ್, ಬಿಜೆಪಿ ಸರ್ಕಾರಗಳ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಿ’ ಎಂದು ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ ನಿಯಮ ಬಾಹಿರವಾಗಿ ಸಿಎಂ ತಮ್ಮ ಪತ್ನಿ ಹೆಸರಿಗೆ ಪರ್ಯಾಯ ನಿವೇಶನ ಪಡೆದಿದ್ದಾರೆ. ಈ ಹಗರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆದರೆ ಸಿಎಂ ರಾಜೀನಾಮೆ ನೀಡಬೇಕಾಗುತ್ತದೆ ಎಂದರು. 

ಸಿದ್ದರಾಮಯ್ಯನವರ ಹಿಂದಿನ ಸರ್ಕಾರದ ಅವಧಿಯಲ್ಲಿ - ಅರ್ಕಾವತಿ ಬಡಾವಣೆಯ ಹಗರಣ ನಡೆದಿತ್ತು. ಪ್ರತಿಪಕ್ಷದ ಹ ನಾಯಕನಾಗಿ ನಾನು ಈ ಹಗರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದ್ದರೂ ಅವರು ನ್ಯಾಯಾಂಗ ತನಿಖೆ ನಡೆಸಲು ಕೆಂಪಯ್ಯ ಆಯೋಗ ರಚಿಸಿದರು. ತನಿಖಾ ವರದಿಯನ್ನು ಸಿದ್ದರಾಮಯ್ಯ ಹಿಂದೆಯೂ ಸದನದಲ್ಲಿ ಮಂಡಿಸಲಿಲ್ಲ. ಹೊಸ ಸರ್ಕಾರ ಬಂದು ವರ್ಷವಾದರೂ ಈಗಲೂ ಮಂಡಿಸಿಲ್ಲ. ಈ ಪ್ರಕರಣದಲ್ಲಿ ತಮ್ಮಷ್ಟಕ್ಕೆ ತಾವೇ ನಿರಪರಾಧಿ ಎಂದುಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಸರ್ಕಾರ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಸಿಎಂ ಬಾಯಿ ಮಾತಲ್ಲಿ ಆರೋಪ ಮಾಡುತ್ತಿದ್ದಾರೆ. ಅವರದೇ ಸರ್ಕಾರವಿದೆ. ತನಿಖಾ ಸಂಸ್ಥೆಗಳಿವೆ. ಅಧಿಕಾರಕ್ಕೆ ಬಂದು ವರ್ಷವಾದರೂ ಏಕೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು. 

ಯಾವುದೇ ಹಗರಣ, ಗಂಭೀರ ವಿಷಯಗಳು ಸದನದಲ್ಲಿ ಚರ್ಚೆಯಾದರೆ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಆದರೆ ಸಿದ್ದರಾಮಯ್ಯನವರು ಸದನಕ್ಕೆ ನೀಡಬೇಕಿದ್ದ ಉತ್ತರವನ್ನು ಪತ್ರಿಕೆಗಳಿಗೆ ಜಾಹೀರಾತು ನೀಡಿ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ನಾಲ್ಕು ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಸರ್ಕಾರದ ಇಂತಹ ಶೋಚನೀಯ ಸ್ಥಿತಿಯನ್ನು ಎಂದೂ ನೋಡಿರಲಿಲ್ಲ’ ಎಂದರು. ಗದಗ -ಹರಪನಹಳ್ಳಿ ರೈಲ್ವೆ ಯೋಜನೆ ಮರು ಪ್ರಸ್ತಾವ:ನನೆಗುದಿಗೆ ಬಿದ್ದಿರುವ ಗದಗ-ಮುಂಡರಗಿ ಹಡಗಲಿ ಗ್ರಾಮ -ಹರಪನಹಳ್ಳಿ ರೈಲ್ವೆ ಯೋಜನೆಯ ಪ್ರಸ್ತಾವವನ್ನು ಮತ್ತೊಮ್ಮೆ ಕುರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಮಂಜೂರಾತಿ ಕೊಡಿಸಲು ಪ್ರಯತ್ನಿಸುವೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಮುಖ್ಯ ಕಚೇರಿಯಿಂದಲೂ ಈ ಯೋಜನೆಯ ಪೂರಕ ಮಾಹಿತಿ ಪಡೆದು ಕೇಂದ್ರಕ್ಕೆ ಸಲ್ಲಿಸುವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ ಇದ್ದರು. 


ಸುದ್ದಿ ಓದಿ