ಕಾಗವಾಡ

‘ರವೀಂದ್ರ ಗಾಣಿಗೇರಗೆ ಮತ್ತೊಬ್ಬರನ್ನು ಬೆಳೆಸಿ ಬೆಳೆಯುವ ಗುಣವಿತ್ತು’

‘ರವೀಂದ್ರ ಗಾಣಿಗೇರಗೆ ಮತ್ತೊಬ್ಬರನ್ನು ಬೆಳೆಸಿ ಬೆಳೆಯುವ ಗುಣವಿತ್ತು’

ಕಾಗವಾಡ 21: ತಮ್ಮ ಇಡೀ ಜೀವನದಲ್ಲಿ ಮತ್ತೊಬ್ಬರನ್ನು ಬೆಳೆಸಿ ಬೆಳೆಯುವ ಗುಣ ಹೊಂದಿದ್ದವರು ಮತ್ತು ಬಡವ, ಶ್ರೀಮಂತ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ವ್ಯಕ್ತಿತ್ವ ಹೊಂದಿದ್ದ ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ರವೀಂದ್ರ ಗಾಣಿಗೇರ ರವರ ಬದುಕಾಗಿತ್ತು ಎಂದು ಸಿದ್ಧೇಶ್ವರ ದೇವಸ್ಥಾನ ಸಮೀತಿ ಅಧ್ಯಕ್ಷ ರಾಜುಗೌಡ ಪಾಟೀಲ ಹೇಳಿದರು. 

ಶನಿವಾರ ರಂದು ಶಾಂತಿಸಾಗರ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ದಿವಂಗತ ರವೀಂದ್ರ ಗಾಣಿಗೇರ ಇವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರವೀಂದ್ರ ಗಾಣಿಗೇರ ಇವರು ಗ್ರಾಮೀಣ ಭಾಗದಲ್ಲಿ ಬಡ ಕುಟುಂಬದ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ನಿರಂತರವಾಗಿ ಪ್ರಯತ್ನಿಸಿದ್ದರು. ಈಗ 1200 ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಎಲ್ಲ ಕುಟುಂಬಗಳಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆಯೆಂದರು. 

ಸಂಸ್ಥೆಯ ಸಂಚಾಲಕ ಬಾಳಾಸಾಹೇಬ ದಾನೊಳ್ಳಿ, ಪಾಯಪ್ಪಾ ಕುಡವಕ್ಕಲಗಿ, ಕೆ.ಆರ್‌.ಇ.ಎಸ್ ಶಿಕ್ಷಣ ಸಂಸ್ಥೆ ಸಂಚಾಲಕ ರಾಜೇಂದ್ರ ಪೋತದಾರ, ಗಜಾನನ ಯರೆಂಡೋಲಿ, ಸಂಜೀವ ಭಿರಡಿ, ನ್ಯಾಯವಾದಿ ಸಂಜಯ ಕುಚನೂರೆ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ನಿಖಿಲ ಮಹಾಜನ ಇವರು ರವೀಂದ್ರ ಗಾಣಿಗೇರ ರವರ ಸರಳ ಹಾಗೂ ಸಜ್ಜನಿಕೆ ಮತ್ತು ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ ಸಂಸ್ಥೆ ಬೆಳೆಸಲು ನೀಡಿದ ಅಪಾರ ಕೊಡುಗೆ ಬಗ್ಗೆ ಮಾತನಾಡಿದರು. 

ಪಟ್ಟಣದ ಹಿರಿಯರಾದ ಮಾಜಿ ಜಿಪಂ ಸದಸ್ಯ ಚಂದ್ರಶೇಖರ ಗಾಣಿಗೇರ, ಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷ ಪ್ರವೀಣ ಗಾಣಿಗೇರ, ಸುಭಾಷ ಪಾಟೀಲ, ಉಮೇಶ ಕಾರ್ಚಿ, ತಾತ್ಯಾಸಾಹೇಬ ಕುಚನೂರೆ, ಶಾಂತಿಸಾಗರ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರುಣ ಗಾಣಿಗೇರ ಇವರಿಂದ ದಿವಂಗತ. ರವೀಂದ್ರ ಗಾಣಿಗೇರ ರವರ ಪ್ರತಿಮೆಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 

ಕಾಗವಾಡ ತಾಲ್ಲೂಕಿನ ಐನಾಪುರದ ಶಾಂತಿಸಾಗರ ವಿದ್ಯಾಪೀಠದಲ್ಲಿ ಪಟ್ಟಣದ ಬೇರೆ-ಬೇರೆ ಶಿಕ್ಷಣ ಸಂಸ್ಥೆಗಳ 10ನೇ ತರಗತಿಯಲ್ಲಿ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಸಮಾರಂಭ ಜರುಗಿತು. 

99.52ಅ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದ ಪದ್ಮಾವತಿ ಶಿಕ್ಷಣ ಸಂಸ್ಥೆಯ ಸೌಮ್ಯಾ ಶ್ರೀಶೈಲ ಅವಟಿ, 99.36ಅ ಪಡೆದ ಕೆ.ಆರ್‌.ಇ.ಎಸ್ ಶಿಕ್ಷಣ ಸಂಸ್ಥೆಯ ಸುಪ್ರೀತಾ ಕೃಷ್ಣಾ ತೋಡಕರ, 99.20ಅ ಪಡೆದ ಶ್ರೀಹರಿ ವಿದ್ಯಾಲಯದ ಸಾಕ್ಷಿ ದೀಲಿಪ ಸೂರ್ಯವಂಶಿ, ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ ಸಾಕ್ಷಿ ಜಾಹಗಿರದಾರ(99.04ಅ), ಶಿವಾನಿ ತೇಲಿ(98.88ಅ), ನಮ್ರತಾ ಘಾಟಗೆ(98.72ಅ) ಈ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. 

ಪುಣ್ಯಸ್ಮರಣೆ ನಿಮಿತ್ಯ ಕಬ್ಬಿನ ಹಾಲು ಹಂಚಿಕೆ: 

ರವೀಂದ್ರ ಗಾಣಿಗೇರ ಇವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಕಬ್ಬಿನ ಹಾಲು ಮಾರಾಟ ಮಾಡುವ ಪಾಲಕ ಪ್ರಹ್ಲಾದ್ ಮಾನೆ ಇವರು ಎಲ್ಲ ವಿದ್ಯಾರ್ಥಿಗಳಿಗೆ ಕಬ್ಬಿನ ಹಾಲು ನೀಡುವ ಮುಖಾಂತರ ಶ್ರದ್ಧಾಂಜಲಿ ಸಲ್ಲಿಸಿದರು. 

ಸುರೇಶ ಗಾಣಿಗೆರ, ಆದಿನಾಥ ದಾನೊಳ್ಳಿ, ಗುರುರಾಜ ಮಡಿವಾಳರ, ಪ್ರಕಾಶ ಚಿನಗಿ, ಗೋಪಾಲ ಮಾನಗಾಂವೆ, ಅರವಿಂದ ಕಾರ್ಚಿ, ಕುಮಾರ ಜಯಕರ, ಪ್ರಕಾಶ ನಾಯಿಕ, ರಾಜು ಹರಳೆ, ಮಹಾಂತೇಶ ಮಹಾಜನ, ಅಮಗೊಂಡಾ ವಡೆಯರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸರಸ್ವತಿ ಬ್ಯಾಡಗಿ ಸ್ವಾಗತಿಸಿ, ಕುಮಾರ ಗಾಣಿಗೇರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ