ಯುವಕರಿಂದ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ: ರವಿ ಬಡಕಂಬಿ
ಅಥಣಿ 03: ಇಡೀ ಭಾರತ ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಯುವಕರಿದ್ದು ಪ್ರಪಂಚದಲ್ಲಿ ಅತೀ ಹೆಚ್ಚು ಯುವಕರಿಂದ ಕೂಡಿದ ನಮ್ಮ ಭಾರತ ದೇಶದಲ್ಲಿ ಅಭಿವೃದ್ದಿ ಯುವಕರಿಂದಲೇ ಮಾತ್ರ ಸಾಧ್ಯ ಆ ಯುವಕರನ್ನು ಸಂಘಟಿಸುವ ಕೆಲಸ ನಾವು ಮಾಡಬೇಕು ಎಂದು ಅಥಣಿ ಬ್ಲಾಕ್ ಕಾಂಗ್ರೇಸ್ ಯುವಘಟಕ ಅಧ್ಯಕ್ಷ ರವಿ ಬಡಕಂಬಿ ಅವರು ಹೇಳಿದರು.
ಅವರು ಸ್ಥಳೀಯ ನಗರದಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೇಸ್ ಯುವಘಟಕದ ಅಧ್ಯಕ್ಷ ರವಿ ಬಡಕಂಬಿ ಅವರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ವೇಳೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡ ಯುವ ಮುಖಂಡ ಪ್ರಮೋದ ಬಿಳ್ಳೂರ ಮಾತನಾಡುತ್ತಾ ಕಾಂಗ್ರೇಸ ಪಕ್ಷವು ಮತ್ತೇ ಯುವಕರನ್ನು ಸಂಘಟಿಸುತ್ತಾ ಸಾಗಿದ್ದು ಈ ಯುವಕರ ಸಹಾಯದಿಂದಲೇ ಅಥಣಿಯಲ್ಲಿ ಮತ್ತೆ ಗದ್ದುಗೆ ಏರಲಿದೆ ಅದಕ್ಕಾಗಿ ಎಲ್ಲರೂ ಕೂಡಿ ಕಾರ್ಯಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಂತರ ಯುವ ಮುಖಂಡರಾದ ಮಲ್ಲಿಕಾರ್ಜುನ ಬುಟಾಳಿ, ಸಂತೋಷ ಸಿಂದಗಿ, ಮಂಜುನಾಥ ಹೋಳಿಕಟ್ಟಿ, ಸಂತೋಷ ಬಡಕಂಬಿ ಮಾತನಾಡಿದರು. ಈ ವೇಳೆ ತೌಸಿಫ್ ಸಾಂಗಲಿಕರ, ರಾಹುಲ ಮಂಗಸೂಳಿ, ರಮೇಶ ಮಾಳಿ, ಬಸವರಾಜ ಯಳಮೆಲ್ಲಿ, ವಿನಾಯಕ ಹೊನಕಾಂಡೆ, ಅಮೀತ ಕುಬಸದ, ಸಾಗರ ಸಕರೆ, ಬಸವರಾಜ ಬಂಗಿ, ಭೀಮು ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.