ಹೂವಿನ ಹಡಗಲಿ

ಪಡಿತರ ಅಕ್ರಮ : ಸಿಪಿಐ ಮತ್ತು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮಂಡಳಿ ಆಗ್ರಹ

ಪಡಿತರ ಅಕ್ರಮ : ಸಿಪಿಐ ಮತ್ತು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮಂಡಳಿ ಆಗ್ರಹ

ಹೂವಿನ ಹಡಗಲಿ 10: ತಾಲೂಕಾದ್ಯಂತ ಪಡಿತರ ಅಕ್ರಮ ಮಾರಾಟ ವ್ಯಾಪಕವಾಗಿದ್ದು, ಕೂಡಲೇ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ ಮತ್ತು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮಂಡಳಿ ಆಗ್ರಹಿಸಿವೆ. ಈ ಕುರಿತು ಶುಕ್ರವಾರ ಇಲ್ಲಿನ ತಹಸಿಲ್ ಕಚೇರಿಗೆ ತೆರಳಿದ ಸಿಪಿಐ ಮತ್ತು ಮಂಡಳಿಯ ಪದಾಧಿ ಕಾರಿಗಳು ಶಿರಸ್ತೇದಾರರಿಗೆ ದೂರು ಸಲ್ಲಿಸಿ, ಕೂಡಲೇ ಕ್ರಮ ಕೈಗೊಂಡು ಅಕ್ರಮ ಮಾರಾಟ ನಿಯಂತ್ರಿಸುವಂತೆ ಆಗ್ರಹಿಸಿದರು.ಬಳಿಕ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಸುರೇಶ ಹಲಗಿ, ಪಡಿತರ ಚೀಟಿಗೆ ಕೊಡುವ ಅಕ್ಕಿ, ರಾಗಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಮರುಕ್ಷಣವೇ ಅಕ್ರಮ ಮಾರಾಟವಾಗುತ್ತಿದೆ. ರಾಜಾರೋಷವಾಗಿ ಎಲ್ಲೆಂದರಲ್ಲಿ ಮಾರಾಟವಾಗುತ್ತಿದ್ದು, ಇದರ ಹಿಂದೆ ದೊಡ್ಡ ಜಾಲವೇ ಅಡಗಿದೆ.  

ಅಕ್ರಮ ದಂಧೆ ಅಧಿಕಾರಿಗಳ ಗಮನಕ್ಕಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.ಭಾರತ ದಲಿತ ಹಕ್ಕುಗಳ ಆಂದೋಲನ ಮಂಡಳಿಆದ್ದರಿಂದ ಮೇಲಧಿಕಾರಿಗಳು ಗಮನಿಸಿ ಕೂಡಲೇ ಕಾನೂನು ಕ್ರಮ ಜರುಗಿಸಬೇಕು.ಸರಕಾರ ಆಹಾರ ಭದ್ರತೆ ಯೋಜನೆಯಡಿ ಬಡವರಿಗೆ ಉಚಿತವಾಗಿ ಪಡಿತರ ವಿತರಿಸುತ್ತಿದೆ. ಆದರೆ ಪಡಿತರ ಧಾನ್ಯಗಳು ಅಕ್ರಮ ಮಾರಾಟವಾಗುವ ಮೂಲಕ ದುರ್ಬಳಕೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಅಕ್ರಮ ದಂಧೆಕೋರರ ಮೇಲೆ ದಾಳಿ ನಡೆಸಿತಪಶೀಲಾರದೆ ತಾಯಾಗಿ ದಂಡಾಧಿಕಾರಿಗಳ ಕಾರ್ಯಾಲಯ,ಹೂವಿನಹಡಗಲಿಯಲ್ಲಿ ಪಡಿತರ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಸಿಪಿಐ ಹಾಗೂ ಅಖಿಲಪದಾಧಿಕಾರಿಗಳು ಶಿರಸ್ತೇದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.  

ಮಾರಾಟ ನಿಯಂತ್ರಿಸಬೇಕು. ಇಲ್ಲದಿದ್ದರೆ ಇಲಾಖೆ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮೆಹಬೂಬ ಬಾಷಾ, ಮುಕುಂದಗೌಡ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಶಿವರಾಜ ಇದ್ದರು. ಬಳಿಕ ಶಿರಸ್ತೇದಾರ ಸಲೀಂ ಅವರಿಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ