ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ಅದ್ದೂರಿಯಾಗಿ ನಡೆದ ಸೂರ್ಯನಾರಾಯಣ ರಥಸಪ್ತಮಿ

ರಾಣೇಬೆನ್ನೂರಲ್ಲಿ ಅದ್ದೂರಿಯಾಗಿ ನಡೆದ ಸೂರ್ಯನಾರಾಯಣ ರಥಸಪ್ತಮಿ

ರಾಣೇಬೆನ್ನೂರು 29:  ನಗರದ  ಸೂರ್ಯವಂಶ ಕ್ಷತ್ರಿಯ ಕಲಾಲ (ಖಾಟಿಕ ) ಸಮುದಾಯದ ಆರಾಧ್ಯ ದೈವ ಸೂರ್ಯನಾರಾಯಣ ಸ್ವಾಮಿಯ ವಾರ್ಷಿಕ ಸಂಪ್ರದಾಯದ ಮಹಾರಥೋತ್ಸವ ಧಾರ್ಮಿಕ ಕಾರ್ಯಕ್ರಮವು ಶನಿವಾರ ವಾಣಿಜ್ಯ ನಗರದಲ್ಲಿ  ಅತ್ಯಂತ ಸಡಗರ ಸಂಭ್ರಮದೊಂದಿಗೆ  ನಡೆಯಿತು.           

  ಸಮಾಜದ ಇಂದಿರಾ ಸಭಾಭವನದಲ್ಲಿ ಮುಂಜಾನೆ ಸೂರ್ಯನಾರಾಯಣ ಸ್ವಾಮಿಯ, ಅಭಿಷೇಕ, ಹೋಮ, ಹವನ ಮಹಾಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಎಪಿಎಂಸಿ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಿಂದ  ರಥಸಪ್ತಮಿಯ ಮೆರವಣಿಗೆಯು ಭವ್ಯ ತೈಲ  ಭಾವಚಿತ್ರದೊಂದಿಗೆ ಅಲಂಕೃತ ಮಂಟಪದಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನ: ದೇವಸ್ಥಾನದ ಸಭಾ ವೇದಿಕೆಗೆ  ಸಾಂಗತ್ಯಗೊಂಡಿತು. ವಿಶೇಷ ಉಪನ್ಯಾಸ, ಧರ್ಮ ಜಾಗೃತಿ ಸಮಾವೇಶ, ಸಮುದಾಯದ ಸಮಾಲೋಚನಾ ಸಭೆ ನಡೆದು, ವಾರ್ಷಿಕ ರಥಸಪ್ತಮಿಯು, ಸಾಂಗ ಮಂಗಲ ಗೊಳಿಸಲಾಯಿತು. ಈ ನಿಮಿತ್ತ ಸಾರ್ವಜನಿಕವಾಗಿ ಮಹಾ ಪ್ರಸಾದ ವಿತರಣೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಕ್ಷತ್ರಿಯ ಸಮಾಜ ಸಮುದಾಯದ ಮುಖಂಡರಾದ ಮಣಿ ಪವಾರ, ರಾಮಣ್ಣ ನಾಯಕ, ಕೃಷ್ಣ ಪವಾರ್,ಗಣೇಶ್ ಪವಾರ, ವೆಂಕಟೇಶ್ ಮಾಂಡ್ರೆ, ಧಲಬಂಜನ  ತುಳಜಪ್ಪ ಲದ್ವಾ, ಹಿರೇಶ್ ನಾಯಕ್, ರಮೇಶ್ ನಾಯಕ್, ಪ್ರವೀಣ್, ರವಿ ಮಾಂಡ್ರೆ, ಮತ್ತು ಸೂರ್ಯವಂಶ ಕ್ಷತ್ರಿಯ ಮುಖಂಡರಾದ ಅಧ್ಯಕ್ಷ ರಮೇಶ್ ಕಲಾಲ್, ಉಪಾಧ್ಯಕ್ಷರಾದ ಕುಮಾರ್ ಕುಂಚೊರಕರ್, ಜಗದೀಶ ಕಲಾಲ್, ಸದಾನಂದ ಕಲಾಲ್, ಕಾರ್ಯದರ್ಶಿ  ವಿನಾಯಕ ಶಿಗ್ಲಿಕರ್, ಸಹ ಕಾರ್ಯದರ್ಶಿ  ಪರಮೇಶ್ ಗುಡ್ಡದ - ಕಲಾಲ್, ಖಜಾಂಚಿ ಪರಶುರಾಮ ಅಂಕುಶಖಾನಿ, ರಮೇಶ್ , ಜಗದೀಶ್ ಕುವಾರಕರ್, ಸದಾನಂದ ಕಲಾಲ್  ರಾಧಾಬಾಯಿ ಶಾಪುರಕರ್, ಶಾಂತಾಬಾಯಿ ಪ್ರಕಾಶ್ ಕಲಾಲ್, ಶಿಗ್ಲಿಕರ್, ನೀಲಮ್ಮ ಡೊಂಗ್ರೆಕರ್, ಶಕುಂತಲಾಬಾಯಿ ಕುಂಚೂರಕರ, ರುಕ್ಮಿಣಿ ಬಾಯಿ ಕಲಾಲ್, ಪರಶುರಾಮ್ ಡೊಂಗ್ರೆಕರ್,ರಾಘವೇಂದ್ರ ಕಲಾಲ್ ಕರಬಸಪ್ಪ ಪತ್ತೇಪುರಿ, ಗುರುರಾಜ್ ರಾಯಬಾಕರ್, ದೀಪಕ ಕಲಾಲ, ಗುರುರಾಜ ಕುಂಚೂರಕರ್, ದಾದಣ್ಣ ಮಿರಜಕರ್, ಅಪ್ಪಣ್ಣ ಬುಜರುಕರ್, ಗುರುರಾಜ್ ಜೋರಾಪುರ, ಸುರೇಶ್ ಪತ್ತೆಪುರಿ, ಪವನ್ ಕಲಾಲ್, ಸೇರಿದಂತೆ ಸಮಾಜದ ಅನೇಕ ಮುಖಂಡರು ಯುವ ಸಂಘಟನೆಯ ಗಣ್ಯರು, ಕಲಾಲ್ ಗೆಳೆಯರ ಬಳಗದ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು 

ಸುದ್ದಿ ಓದಿ